ಒಂದಂಕಿ ಕಮ್ಮಿ ಎಂದು ಆತ್ಮಹತ್ಯೆ ಸಲ್ಲದು : ಪಾಂಡೋಮಟ್ಟಿ ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೬; ಕೇವಲ ಅಂಕಗಳಿಕೆಯೇ ಸಾಧನೆಯಲ್ಲ ಅದಕ್ಕೂ ಮೀರಿದ ಜೀವನವಿದೆ ಎಂಬುದನ್ನು ಮರೆಯಬಾರದು ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು. ನಗರದ ಗುರುಭವನದಲ್ಲಿ ವಿಶ್ವ ವೀರಶೈವ ಲಿಂಗಾಯಿತ ಏಕೀಕರಣ ಪರಿಷತ್ (ರಿ.) ದಾವಣಗೆರೆ ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ನಿಂದ ಆಯೋಜಿಸಿದ್ದ ಶ್ರೀಗುರು ರೇಣುಕರ ಯುಗಮಾನೋತ್ಸವ, ಹಾಗೂ ಜಗಜ್ಯೋತಿ ಬಸವೇಶ್ವರ, ಕಾಯಕಯೋಗಿ ಬಸವಶ್ರೀ, ಕಾಯಕಯೋಗಿ ಶರಣೆ ಪ್ರಶಸ್ತಿ ಪ್ರಧಾನ ಹಾಗೂ 2024ರ ಸಾಲಿನ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಯಲ್ಲಿ ಶೇ 90ಕ್ಕೂ ಹೆಚ್ಚು ಅಂಕಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಥಾರ ಪ್ರಧಾನ ಸಮಾರಂಭದಲ್ಲಿಆಶೀರ್ವಾದ ನೀಡಿದರು. ಇಂದು 99 ಅಂಕ ಪಡೆದವರಿಗೆ ಹೋಲಿಸಿಕೊಂಡು ತನಗೆ 98 ಬಂದಿದೆ ಎಂದು ಆತ್ಮಹತ್ಯೆಗಳು ಆಗುತ್ತಿರುವುದದುರ್ದೈವ, ಖೇಧದ ಸಂಗತಿ. ಅಂಕ ತೆಗೆವುದೇ ಜೀವನ ಅಲ್ಲ. ಅದಕ್ಕೂ ಮೀರಿಜೀವನ ಇದೇ ಅದನ್ನು ರೂಪಿಸಿ ಕೊಳ್ಳಿ ಎಂದು ಜೀವನ ಉತ್ಸವದ ಮಾತುಗಳನ್ನಾಡಿದರು.
    ಜಸ್ಟೀಸ್ ಅರಳೀ ನಾಗರಾಜ್ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ಜೀವನದ ಅಡೆತಡೆಗಳು ಬಂದರು, ಛಲ ಬಿಡದೆ ವಿದ್ಯಾಭ್ಯಾಸ ಮಾಡಿದ ಬಗ್ಗೆ ದೃಢ ಚಿತ್ತ, ಶ್ರದ್ಧೆ ಅಭ್ಯಾಸದ ಬಗ್ಗೆ ಎಳೆ ಎಳೆ ಬಗ್ಗೆ ಬಿಡಿಸಿಟ್ಟರು, ಭ್ರಷ್ಟರ ತಡೆಯಲು ಯುವ ಜನರ ಮನಸ್ಸು ಬಹಳ ಮುಖ್ಯ ಎಂದು ತಿಳಿಸಿದರು.