ಮಾಳಿ ಸಮಾಜಕ್ಕೆ ಒಂದು ಎಂಎಲ್ ಸಿ ಸ್ಥಾನ ನೀಡಬೇಕು : ಸಿ ಬಿ ಕುಲಗೋಡ
ಅಥಣಿ : ಮೇ.27:ಮಾಳಿ ಮಾಲಗಾರ ಸಮಾಜದಕ್ಕೆ ಶೀಘ್ರ ನಿಗಮ ಮಂಡಳಿ ರಚನೆಯ ಕೆಲಸವನ್ನು ಈ ಸರಕಾರ ಪೂರ್ಣಗೊಳಿಸಿ ನಮ್ಮ ಸಮುದಾಯಕ್ಕೆ ಒಂದು ಎಮ್ ಎಲ್ ಸಿ ಸ್ಥಾನವನ್ನು ಕೊಟ್ಟು ಹಿಂದುಳಿದ ಸಮುದಾಯವನ್ನು ಮೇಲೆತ್ತುವ ಕೆಲಸವನ್ನು ಸರಕಾರ ಮಾಡಬೇಕಿದ್ದು ನಾವೆಲ್ಲ ಸೇರಿ ಒತ್ತಾಯಿಸೋಣ ಎಂದು ಸನಾಜದ ಹಿರಿಯ ಮುಖಂಡ ಡಾ ಸಿ ಬಿ ಕುಲಗೋಡ ಅವರು ಹೇಳಿದರು.
ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅಥಣಿ ತಾಲೂಕಾ ಸಮಸ್ತ ಮಾಳಿ ಸಮಾಜ ಹಾಗೂ ಶ್ರೀ ಮಹಾತ್ಮಾ ಜ್ಯೋತಿಬಾಫುಲೆ ಮಾಳಿ ಸಮಾಜ ಯುವಕ ಸಂಘದವರು ಹಮ್ಮಿಕೊಂಡ 2024 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಮಾಜದ ಹಕ್ಕೊತ್ತಾಯಕ್ಕಾಗಿ ಅತೀ ಶೀಘ್ರದಲ್ಲಿ ಎಲ್ಲ ಸಮಾಜ ಬಾಂಧವರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಎಲ್ಲರೂ ಸೇರಿ ಪ್ರತಿಭಟನೆ ಮಾಡೋಣ, ಸರಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಸಾಮಾಜಿಕ ನ್ಯಾಯ ಪಡೆಯೋಣ ಎಂದು ಕರೆ ನೀಡಿದರು.
ಅನಂತರ ಮಾಳಿ ಸಮಾಜ ರಾಜ್ಯಾಧ್ಯಕ್ಷ ಕಾಡು ಮಾಳಿ ಅವರು ಮಾತನಾಡಿ ಇಡೀ ಕರ್ನಾಟಕದಲ್ಲಿ ಅಲ್ಲಲ್ಲಿ ಹರಡಿದ್ದ ಮಾಳಿ ಸಮಾಜ ಬಾಂಧವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು ಎಲ್ಲರೂ ಸೇರಿ ಸಮಾಜವನ್ನು ಎಚ್ಚರಿಸಿ ನಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಸನ್ಮಾನ ಪಡೆದ ವಿದ್ಯಾರ್ಥಿಗಳು ಮುಂಬರುವ ದಿನಮಾನದಲ್ಲಿ ಸಮಾಜಕ್ಕೆ ತಾವೂ ಕೂಡ ಕೊಡುಗೆ ಕೊಡುವಂತಾಗಬೇಕು ಎಂದರು.
ಈ ವೇಳೆ ಮುಖಂಡರಾದ ಶಿವಾನಂದ ದಿವಾನಮಳ, ಗಿರೀಶ ಬುಟಾಳಿ, ಬಸವರಾಜ ಬುಟಾಳಿ, ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಹಿರಿಯ ಅಭಿಯಂತರ ಎಸ್ ಬಿ ಬಾಗಿ ಅವರು ಮಾತನಾಡಿದರು.
ಶೆಟ್ಟರಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು,
ಅನಂತರ ಸಮೀತಿ ವತಿಯಿಂದ ಸುಮಾರು 120 ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯ್ತು, ಸಚಿನ ಬುಟಾಳಿ, ಸುರೇಶ ಕಾಗಲೆ, ಚಿದಾನಂದ ಮಾಳಿ, ಬಿ ಎಸ್ ಯಾದವಾಡ, ಕಲ್ಲಪ್ಪಾ ನರೋಡೆ, ಮೃತ್ಯುಂಜಯ ಮಲ್ಲುಖಾನ, ಸಂತೋಷ ನಿಡೋಣಿ, ಚಿದಾನಂದ ಬಡಕಂಬಿ, ಡಾ ಆನಂದ ಲಗಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ವೇಳೆ ಮಹಾಂತೇಶ ಮಾಳಿ, ಸಂತೋಷ ಬಡಕಂಬಿ, ರವಿ ಬಡಕಂಬಿ, ಪ್ರಶಾಂತ ತೋಡಕರ, ರಮೇಶ ಮಾಳಿ, ಶಿವಲಿಂಗ ಬೆಳ್ಳಂಕಿ, ಮಹಾದೇವ ಚಮಕೇರಿ, ರಾಮನಿಂಗ ಬಡಕಂಬಿ, ಮಾಂತೇಶ ಭಾಸಿಂಗಿ, ರವಿ ಬಕಾರಿ, ಮಲ್ಲಿಕಾರ್ಜುನ ಪ್ಯಾಟಿ, ನಾಗಪ್ಪಾ ಉಗಾರೆ, ಶ್ರೀಶೈಲ ಕಿವಡಿ, ಪ್ರವೀಣ ಕವಲಾಪೂರ, ಶಿವಪ್ಪಾ ಹಲವೇಗಾರ, ಕೇದಾರಿ ದಿವಾನಮಳ, ತ್ರಿಮೂರ್ತಿ ಶೇಡಬಾಳ, ಸಚಿನ ಬಡಕಂಬಿ ಸೇರಿದಂತೆ ಅನೇಕರಿದ್ದರು.