ಪದಾಧಿಕಾರಿಗಳ ಆಯ್ಕೆ
ಹುಮನಾಬಾದ :ಮೇ.27:ಪಟ್ಟಣದಲ್ಲಿ ಸರಾಫ್ ಬಜಾರ್ ಸಭಾಂಗಣದಲ್ಲಿ ತಾಲೂಕಿನ ವಿಶ್ವಕರ್ಮ ಸಮಾಜದ ಎಲ್ಲಾ ಪ್ರಮುಖರ ಸಭೆ ಕರೆಯಲಾಯಿತು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷರಾದ ದತ್ತಾತ್ರಿ ವಿಶ್ವಕರ್ಮ, ಯುವ ಘಟಕದ ಅಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮ, ಜಿಲ್ಲಾ ಉಪಾಧ್ಯಕ್ಷರಾದ ಸೋಮನಾಥ ಪಂಚಾಳ ಹಾಗೂ ಪಾಂಡುರಂಗ ಪಂಚಾಳ ಇವರುಗಳ ನೇತೃತ್ವದಲ್ಲಿ ಹುಮನಾಬಾದ ತಾಲೂಕಾ ಘಟಕದ ಅಧ್ಯಕ್ಷರಾಗಿ ಬಾಬುರಾವ ಪಂಚಾಳ, ಉಪಾಧ್ಯಕ್ಷರಾಗಿ ರಮೇಶ ವಿಶ್ವಕರ್ಮ, ಕಾರ್ಯದರ್ಶಿಯಾಗಿ, ಪ್ರಕಾಶ ಪಂಚಾಳ, ಕಾರ್ಯಕರಣಿ ಸದಸ್ಯರಾಗಿ ಸಂಜುಕುಮಾರ ಪಂಚಾಳ, ಈಶ್ವರ ಪಂಚಾಳ, ಮಂಜುನಾಥ ಪಂಚಾಳ, ಸಿದ್ದು ಪಂಚಾಳ, ವಿನೋದ ಪಂಚಾಳ,ಸಚೀನ ಪಂಚಾಳ,ವೇಂಕಟ ಪಂಚಾಳ, ಕೃಷ್ಣಾ ಪಂಚಾಳ,ಬಲಭೀಮ ಪಂಚಾಳ,ದಿಲಿಪ ಪಂಚಾಳ, ಶಿವಕುಮಾರ ಪಂಚಾಳ ಆಯ್ಕೆ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ¸ದ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.