ರೈತ ಸಂಘಕ್ಕೆ ಶರಣಕುಮಾರ ಹೊಸಗೌಡ್ರು ಅದ್ಯಕ್ಷ
ಜೇವರ್ಗಿ : ಮೇ.27:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜೇವರ್ಗಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಶರಣಕುಮಾರ ಈರಣ್ಣಗೌಡ ಹೊಸಗೌಡ್ರು ಅವರನ್ನು ನೇಮಕ ಮಾಡಲಾಯಿತು.
ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ತಂಬೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳ ಭಜಂತ್ರಿ, ಕರ್ನಾಟಕ ರಾಜ್ಯ ರೈತ ಸಂಘ ಯುವ ಘಟಕದ ಅಧ್ಯಕ್ಷರಾದ ಸಿದ್ದರಾಮ ಲಕ್ಕೊಂಡ ಹಾಗೂ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕರೆಪ್ಪ ಕರಗೊಂಡ ಅವರ ಸಮ್ಮುಖದಲ್ಲಿ ರೈತ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ವಿವರ ಕೆಳಗಿನಂತಿದೆ.
ಅದ್ಯಕ್ಷ- ಶರಣಕುಮಾರ ತಂದೆ ಈರಣ್ಣಗೌಡ ಹೊಸಗೌಡ್ರು, ವಿರೇಶ ತಂದೆ ಮಲ್ಲೇಶಪ್ಪ ವಿಶ್ವಕರ್ಮ- ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ರೈತ ಮುಖಂಡರಾದ ಹಣಮಂತ್ರಾಯ ತಂದೆ ಬಸಣ್ಣಗೌಡ ಸಂಕಾ, ಶರಣಪ್ಪ ತಂದೆ ಈರಣ್ಣ ಶಿವಬೋ,ನಾಗೇಶ ತಂದೆ ಸೂರ್ಯಕಾಂತ ನವಧಿಗಿ, ಶ್ರೀಶೈಲ ತಂದೆ ಮಹಾಂತಗೌಡ ಸಂಕಾ, ಅರುಣಕುಮಾರ ತಂದೆ ಈರಣ್ಣಗೌಡ ಪಾಟೀಲ್, ಅಣ್ಣಾರಾಯ ತಂದೆ ಕರಣಗೌಡ ಮಕದಮ್, ಸಾಹೇಬಗೌಡ ತಂದೆ ಕಲ್ಲಣಗೌಡ ಸಂಕಾ, ಹುಲೇಪ್ಪ ತಂದೆ ಬಾಬುರಾಯ ಪೂಜಾರಿ ಹಾಗೂ ಮತ್ತೀತರರು ಇದ್ದರು.