ಎಸ್.ಕೆ.ಬೆಳ್ಳುಬ್ಬಿಗೆ ಎಂ ಎಲ್ಸಿ ಟಿಕೆಟ್ ನೀಡಲು: ಡಾ ಕೈಲಾಸನಾಥ ಶ್ರೀಗಳು ಆಗ್ರಹ
ಕೊಲ್ಹಾರ:ಮೇ.27: ಈ ಭಾರಿ ನಡೆಯುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಹುಟ್ಟು ಹೋರಾಟಗಾರ,ರೈತರ ಕಣ್ಮಣಿ,ಶ್ರೀ ಎಸ್.ಕೆ.ಬೆಳ್ಳುಬ್ಬಿ ಯವರಿಗೆ ಟಿಕೇಟು ನೀಡಬೇಕೆಂದು ಕೊಲ್ಹಾರ ಪಟ್ಟಣದ ಶ್ರೀ ಘ ಮ ಪೂ ಧರ್ಮರತ್ನ ಡಾ ಕೈಲಾಸನಾಥ ಮಹಾ ಸ್ವಾಮಿಗಳು ಶೀಲವಂತ ಹಿರೇಮಠ ಪೂಜ್ಯರು ಒತ್ತಾಯಿಸಿದರು,
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೆಂದ್ರರವರಿಗೂ,ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿರಿಯ ರಾಜಕೀಯ ಗಣ್ಯರಿಗೂ ಪತ್ರದ ಮೂಲಕ ಆಗ್ರಹಿಸಿದ್ದಾರೆ, ಬೆಳ್ಳುಬ್ಬಿ ಯವರು ಈಗಾಗಲೇ ಎರಡು ಬಾರಿ ಬಿಜೆಪಿಯಲ್ಲಿ ಶಾಸಕರಾಗಿ ಘಣ ಸರಕಾರದ ಸಚಿವರಾಗಿ ಈ ನಾಡಿನ ಸೇವೆ ಮಾಡಿದ್ದಾರೆ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯ, ವಿಜಯಪೂರ ಜಿಲ್ಲೆಯಲ್ಲಿ ಹೊಸ ಎಂಟು ತಾಲ್ಲೂಕು ಆಲಮಟ್ಟಿ ನೆರೇ ಸಂತ್ರಸ್ತರಿಗೆ ಏಕರೂಪದ ಪರಿಹಾರ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಸಮಯದಲ್ಲಿ ತಮ್ಮ ಆರೋಗ್ಯದ ಗಮನ ಕೊಡದೆ ರಾಜ್ಯಾದ್ಯಂತ ಪ್ರಚಾರದಲ್ಲಿ ಭಾಗಿಯಾಗಿದ್ದರು, ಇಂತಹ ದೇಶಾಭಿಮಾನಿ – ಪಕ್ಷಾಭಿಮಾನಿ ಎಸ್ ಕೆ ಬೆಳ್ಳುಬಿ ಯವರಿಗೆ ಎಂ ಎಲ್ ಸಿ ಟಿಕೇಟು ನೀಡಿದರೆ ರಾಜ್ಯದಲ್ಲಿ ಬಿಜೆಪಿಯ ಬಲ ಇಮ್ಮಡಿ ಯಾಗುವದೆಂದು ಎಂದು ಪಕ್ಷದ ವರಿಷ್ಟರಿಗೆ ಕಿವಿ ಮಾತು ಹೇಳಿದರು,