ಶ್ರದ್ಧಾಭಕ್ತಿಯ ದ್ರೌಪದಮ್ಮನವರ ಕರಗೋತ್ಸವ
ಕನಕಪುರ.ಮೇ.೨೭- ನಗರದ ಕೋಡಿಹಳ್ಳಿ ರಸ್ತೆಯಲ್ಲಿ ಇರುವ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ ದೇವಾಲಯದ ೨೭ನೇವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ದ್ರೌಪದಮ್ಮನವರ ಕರಗೋತ್ಸವವು ಬಹಳ ಶ್ರದ್ಧಾಭಕ್ತಿಯಿಂದ ನೆರವೇರಿತು.
ವಗ್ನಿಕುಲ ಕ್ಷತ್ರಿಯ ಜನಾಂಗದಮುಖಂಡರ ನೇತೃತ್ವದಲ್ಲಿ ನಡೆಯಲಿರುವ ಕರಗೋತ್ಸವವು ದೇವಾಲಯದಿಂದ ಹೊರಟು ಕೆಂಕೇರಮ್ಮ ದೇವಾಲಯದಲ್ಲಿ ಪ್ರಥಮವಾಗಿ ಪೂಜೆ ಸ್ವೀಕರಿಸಿದ ನಂತರ ಅಂಬೇಡ್ಕರ್ ನಗರದ, ಪೈಪ್ ಲೈನ್‌ರಸ್ತೆ ಮಾರ್ಗವಾಗಿ ಚಾಮುಂಡೇಶ್ವರಿ ಛತ್ರದ ರಸ್ತೆ, ನಿಂಗಣ್ಣ ಬೀದಿ, ಯಲ್ಲಮ್ಮ ದೇವಸ್ಥಾನದ ಬೀದಿ, ಎಂ.ಎಚ್.ಎಸ್.ರಸ್ತೆಗೆ ಬಂದು ಕನಕ ಆಸ್ಪತ್ರೆಯ ಮಾರ್ಗದಿಂದ ಕೆಂಗಲ್ ಹನುಮಂತಯ್ಯ ವೃತ್ತಕ್ಕೆಬಂದ ನಂತರ ಪೊಲೀಸ್ ಕ್ವಾಟ್ರಸ್ ನಿಂದ ಬಾಣಂತಮಾರಮ್ಮ ಬಾಡವಣೆ, ವಿವೇಕಾನಂದ ನಗರದ ಮೂಲಕ ಮತ್ತೆ ಎಂ.ಜಿ.ರಸ್ತೆ ಮಾರ್ಗವಾಗಿ ಕೋಟೆಯವರೆಗೆ ಬಂದು ಕೋಡಿಹಳ್ಳಿ ರಸ್ತೆಯಲ್ಲಿ ಇರುವ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮನವರ ದೇವಾಲಯದ ಆವರಣಕ್ಕೆ ಬಂದು ಕರಗವು ತಲುಪಿತು.
ನಗರದಲ್ಲಿ ಸಂಚರಿಸಿದ ದ್ರೌಪತಮ್ಮನವರ ಕರಗಕ್ಕೆ ಸಾವಿರಾರು ಭಕ್ತಾದಿಗಳು ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಕೆಳಗಲ ಕೋಟೆಗೆ ಬಂದಾಗ ವಗ್ನಿಕುಲ ಕ್ಷತ್ರಿಯರು ವಾಸ ಮಾಡುವ ಈ ಜಾಗದಲ್ಲಿ ಅಮ್ಮನವರಿಗೆ ಪ್ರತಿ ಮನೆಗಳ ಭಕ್ತಾದಿಗಳಿಂದ ಪೂಜೆ ಸ್ವೀಕರಿಸುತ್ತಾರೆ ಹಾಗೆಯೇ ದಾರಿಯುದ್ದಕ್ಕೂ ಹೂವಿನಿಂದ ಅಲಂಕಾರ ಮಾಡಿದ ರಂಗೊಲಿಯನ್ನಿಟ್ಟು ಸ್ವಾಗತಕೊರುತ್ತಾರೆ. ಕಗರಕ್ಕೆ ಪ್ರತಿಮನೆಗಳಿಂದ ಮಲ್ಲಿಗೆಯ ಹೂವನ್ನು ಹಾಕಿ ಭಕ್ತಿಯನ್ನು ಸಹ ಸಮರ್ಪಿಸಲಾಗುತ್ತದೆ.
ಗಮನ ಸೆಳೆದ ಕರಗ ಅಲಂಕಾರ
ಈ ಬಾರಿ ವಿಶೇಷವಾಗಿ ನಗರದ ಕೋಟೆಯ ರಂಗರಾಜು ಬೀದಿಯಲ್ಲಿ ಶ್ರೀ ಚಾಮುಂಡೇಶ್ವರಿ ಯುವಕರ ಸಂಗದವತಿಯಿಂದ ಅಧ್ಯಕ್ಷರಾದ ಹನುಮಂತರಾಜು, ಗೌರವಾಧ್ಯಕ್ಷರಾದ ವೆಂಕಟೇಶ್ ಎನ್., ಉಪಾದ್ಯಕ್ಷರಾದ ಪ್ರಶಾಂತ, ಖಜಾಂಚಿ ಪ್ರಶಾಂತ್, ಪ್ರಧಾನ ಕಾರ್‍ಯದರ್ಶಿ ಭರತ್ ಮಯ್ಯ, ಸದಸ್ಯರಾದ ಶರತ್, ರಾಕೇಶ್ ಒಳಗೊಂಡಂತೆ ಎಲ್ಲಾ ಸದಸ್ಯರು ದ್ರೌಪತಮ್ಮನವರ ಕರಗದ ಅಲಂಕಾರವನ್ನು ಮಾಡಿ ಈ ಭಾಗದ ಎಲ್ಲಾ ಭಕ್ತಾದಿಗಳ ಗಮನ ಸೆಳೆದರು.
ಈ ಬಾರಿಯ ಕರಗದ ಸಮಿತಿಯ ಯಜಮಾನರಾದ ಕೆ.ವಿ. ಆರ್.ಸ್ವಾಮಿ, ಕುಲದ ಗೌಡರಾದ ವೆಂಕಟರಮಣಸ್ವಾಮಿ, ಗೌರಾದ್ಯಕ್ಷರಾದ ಕೆ.ಜಿ. ಆನಂದ್, ಅಧ್ಯಕ್ಷರಾದ ನಂಜುಂಡಪ್ಪ, ಉಪಾಧ್ಯಕ್ಷರಾದ ಶಿವಣ್ಣ, ಪ್ರಧಾನ ಕಾರ್‍ಯದರ್ಶಿ ಜಯರಾಮ್, ಜಂಟಿ ಕಾರ್‍ಯದರ್ಶಿ ನಾರಾಯಣಸ್ವಾಮಿ ಪಿ, ಖಜಾಂಚಿ ಕೆ.ಜಿ. ಮಂಜುನಾಥ್, ಸಂಚಾಲಕರಾದ ಮೂರ್ತಿ, ಶಿವರಾಜು, ನಿರ್ದೇಶಕರುಗಳಾದ ವಿ.ಸ್ವಾಮಿ, ಕೆ.ಪಿ. ಪರಮಾಳ್, ಟಿ. ರಾಮಚಂದ್ರು, ಕೆ.ಟಿ. ಕಿರಣ್, ಕೆ.ಪಿ. ಆನಂದ್, ಕೆ.ಎನ್.ಶಾಂತರಾಜ್, ಕೆ.ವಿ. ಸುರೇಶ್, ವಿ.ಕೃಷ್ಣ, ಶೇಖರ್, ಕಾಂತಮ್ಮ, ಮೊzಲಾದವರುಗಳು ಯಶಸ್ವಿ ಯಾಗಿ ಕರಗವು ನಡೆಯಲು ಸಿದ್ಧತೆಯನ್ನು ನಡೆಸಿದ್ದರು.
ಕಳೆದ ೧೮ವರ್ಷಗಳಿಂದ ಕನಕಪುರದಲ್ಲಿ ಕರಗವನ್ನು ಹೊತ್ತು ಜನರ ಗಮನ ಸೆಳೆದಿದ್ದ ಒಕ್ಕಲಗೆರಿಯ ರಘುರವರ ಸಹೋದರ ಶ್ರೀನಿವಾಸ್ ಇದೇ ಪ್ರಥಮ ಬಾರಿಗೆ ಕರಗವನ್ನು ಹೊತ್ತು ರಾತ್ರಿ ೧೨.೩೦ರಿಂದ ಬೆಳಗ್ಗೆ ೧೦ಗಂಟೆಯವರೆಗೆ ಭಕ್ತರ ಗಮನ ಸೇಳೆದರು.