ಸಂಕಷ್ಠದಲ್ಲಿರುವರಿಗೆ ಸಹಾಯ, ನಿಜವಾದ ಸಮಾಜ ಸೇವೆ
ಆನೇಕಲ್. ಮೇ.೨೭: ಸಂಕಷ್ಠ ದಲ್ಲಿರುವರಿಗೆ ಸಹಾಯ ಮಾಡುವುದೇ ನಿಜವಾದ ಸಮಾಜ ಸೇವೆ ಎಂದು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಸಿಂಗೇನ ಅಗ್ರಹಾರ ಗೌರೀಶ್ ರವರು ತಿಳಿಸಿದರು. ಅವರು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು ೫೦ ಜನ ಅರ್ಹ ಪಲಾನುಭವಿಗಳಿಗೆ ಉಚಿತವಾಗಿ ಕಣ್ಣಿನ ಕನ್ನಡಕಗಳನ್ನು ವಿತರಿಸಿ ಮಾತನಾಡಿದರು. ಸಮಾಜ ಸೇವೆ ದೊಡ್ಡ ಪ್ರಮಾಣದಲ್ಲಿ ಮಾಡ ಬೇಕೆಂಬುದು ಇಲ್ಲ, ತನ್ನ ಕೈಲಾದ ಮಟ್ಟಿದೆ ಮಾಡಿದರೆ ಸಾಕು ಎಂದರು. ನನ್ನ ಹುಟ್ಟು ಹಬ್ಬ ಇನ್ನೋಬ್ಬರಿಗೆ ಸ್ಪೂರ್ತಿಯಾಗಬೇಕು, ನಾಲ್ಕು ಜನಕ್ಕೆ ಸಹಾಯವಾಗಬೇಕು ಹಾಗೂ ಪಂಚಾಯಿತಿ ಚುನಾವಣೆ ಸಂಧರ್ಭದಲ್ಲಿ ನನಗೆ ಹೆಚ್ಚು ಮತ ಕೊಟ್ಟು ಗೆಲ್ಲಿಸಿದ ಸಿಂಗೇನ ಅಗ್ರಹಾರ ಗ್ರಾಮದ ಜನರಿಗೆ ಏನಾದರೂ ಸಹಾಯ ಮಾಡಬೇಕು ಎಂಬುವ ಉದ್ದೇಶದಿಂದ ನನ್ನ ಹುಟ್ಟು ಹಬ್ಬದಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರ ಆಯೋಜಿಸಲಾಗಿತ್ತು.
ಇನ್ನು ಶಿಬಿರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಬಂದು ಶಿಭಿರದ ಸೌಲಭ್ಯಗಳನ್ನು ಪಡೆದು ಕೊಂಡಿದ್ದಾರೆ ಹಾಗೂ ಸುಮಾರು ೫೦ ಯೂನಿಟ್ ರಕ್ತ ಸಂಗ್ರಹವಾಗಿತ್ತು. ಮತ್ತು ೧೫ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಕೂಡ ಮಾಡಿಸಲಾಗಿದ್ದು ಇಂದು ಸುಮಾರು ೫೦ ಜನ ಅರ್ಹ ಪಲಾನುಭವಿಗಳಿಗೆ ಉಚಿತವಾಗಿ ಕಣ್ಣಿನ ಕನ್ನಡಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಸರ್ಗ ದೃಷ್ಠಿದಾಮದ ದೇವರಾಜ್ ನಾಯ್ಕ್. ಶ್ರೀಮತಿ ಚಾಮುಂಡೇಶ್ವರಿ ಗೌರೀಶ್‌ರವರು, ಸಿಂಗೇನ ಅಗ್ರಹಾರ ಹರೀಶ್. ಲಿಂಗಣ್ಣ, ಶಿವರಾಮಪ್ಪ.ಪ್ರಸನ್ನ. ಗೋವಿಂದ. ಆನಂದ್. ಮುರಳಿ. ಮುನಿಕೃಷ್ಣ. ಸಂತೋಷ್. ಮಂಜುನಾಥ್. ಹರೀಶ್. ಬನಹಳ್ಳಿ ಮದು.ವೇಣು.ಅನಿಲ್. ಸುನೀಲ್ ಮತ್ತು ಗೌರೀಶಣ್ಣ ಅಭಿಮಾನಿ ಬಳಗದವರು ಮತ್ತು ಜಿಕೆವೈ ಬಾಯ್ಸ್, ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಬಳಗದವರು ಇದ್ದರು.