ಕಾರಿಡಾರ್ ಗುತ್ತಿಗೆದಾರದಿಂದ ಬೆಳೆಗಳ ನಷ್ಟ ಎಕರೆಗೆ 5 ಲಕ್ಷ ರೂ ಪರಿಹಾರಕ್ಕೆ ಒತ್ತಾಯ
ಬಂಗಾರಪೇಟೆ ಮೇ.೨೭- ಡಿ.ಬಿ.ಎಲ್ ಚೆನೈ ಕಾರಿಡಾರ್ ರಸ್ತೆ ಅಭಿವೃದ್ದಿ ಗುತ್ತಿಗೆದಾರರ ನಿರ್ಲಕ್ಷ ಹಾಗೂ ಅಧಿಕಾರಿಗಳ ಬೇಜವಬ್ದಾರಿ ಟಿಪ್ಪರ್ ಲಾರಿಗಳ ದೂಳಿನಿಂದ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ವಿತರಣೆ ಮಾಡಿ ಕೆರೆ ಸ್ವರೂಪವನ್ನು ಸರಿಪಡಿಸಲು ವಿಶೇಷ ತಂಡ ರಚನೆ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ ಮೇ.೨೯ ರ ಬುಧವಾರ ಕಲ್ಕೆರೆ ಚೆನ್ನೈ ಕಾರಿಡಾರ್ ಕಾಮಗಾರಿ ಸ್ಥಳದಲ್ಲಿ ಬುಡ್ಡಿ ದೀಪಗಳೊಂದಿಗೆ ಅಹೋರಾತ್ರಿ ಹೋರಾಟ ಮಾಡಲು ನೊಂದ ರೈತ ಸತೀಶ್‌ರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಒಂದು ವಾರದ ಹಿಂದೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ಮಾಡಿದ ಹಿನ್ನಲೆಯಲ್ಲಿ ಡಿ.ಬಿ.ಎಲ್ ಗುತ್ತಿಗೆದಾರರು ಒಂದು ವಾರದೊಳಗೆ ನೊಂದ ರೈತ ಕಲ್ಕೆರೆ ಸತೀಶ್‌ರವರಿಗೆ ತೋಟಗಾರಿಕೆ ಅಧಿಕಾರಿಗಳ ವರದಿಯಂತೆ ೭ ಲಕ್ಷ ಪರಿಹಾರ ವಿತರಣೆ ಮಾಡುತ್ತೇನೆಂದು ಮಾತು ತಪ್ಪಿದ ಗುತ್ತಿಗೆದಾರರ ವಿರುದ್ದ ಮತ್ತೆ ಪರಿಹಾರಕ್ಕಾಗಿ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದು ಮಾತು ತಪ್ಪಿದ ಗುತ್ತಿಗೆದಾರರ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಚೈನ್ನೈ ಕಾರಿಡಾರ್ ರಸ್ತೆ ಹಾದು ಹೋಗುವ ಮಾಲೂರಿನಿಂದ ಮುಳಬಾಗಿಲು ಗಡಿಭಾಗದವರೆಗೆ ಗುತ್ತಿಗೆದಾರರ ನಿರ್ಲಕ್ಷ ಅಧಿಕಾರಿಗಳ ಬೇಜವಬ್ದಾರಿಯಿಂದ ಲಕ್ಷಾಂತರ ರೂ ಬಂಡವಾಳ ಹಾಕಿ ಬೆಳೆದಿರುವಂತಹ ಹೂ ರೇಷ್ಮೇ, ಟೊಮೋಟೋ ಮತ್ತಿತರ ವಾಣಿಜ್ಯ ಬೆಳೆಗಳು ಟಿಪ್ಪರ್ ಲಾರಿಗಳು ಓಡಾಡುವ ಸಮಯದಲ್ಲಿ ಏಳುವ ದೂಳಿನಿಂದ ಸಂಪೂರ್ಣವಾಗಿ ಬೆಳೆ ನಾಶವಾಗಿ ಮಾರುಕಟ್ಟೆಗೆ ಕೊಂಡೋಯ್ಯಲು ಸಾದ್ಯವಾಗದ ಮಟ್ಟಕ್ಕೆ ಬೆಳೆ ನಾಶವಾಗಿದ್ದರೂ ರೈತ ಪರ ನಿಲ್ಲಬೇಕಾದ ಅಧಿಕಾರಿಗಳು ಗುತ್ತಿಗೆದಾರರ ಗುಲಾಮರಾಗಿದ್ದಾರೆಂದು ಅವ್ಯವಸ್ಥೆ ವಿರುದ್ದ ಕಿಡಿ ಕಾರಿದರು
ಪ್ರತಿ ಎಕರೆ ಕ್ಯಾಪ್ಸಿಕಂ ಬೆಳೆಯಲು ೩ ಲಕ್ಷ ಖರ್ಚು ಮಾಡಿ ರೋಗ ನಿಯಂತ್ರuಕ್ಕೆ ಲಕ್ಷಾಂತರ ರೂಪಾಯಿ ಔಷಧಿಗಳಿಗೆ ಬಂಡವಾಳ ಹಾಕಿ ಬೆಳೆ ರಕ್ಷಣೆ ಮಾಡಿಕೊಂಡರೆ ಡಿ.ಬಿ.ಎಲ್ ಗುತ್ತಿಗೆದಾರರ ನಿರ್ಲಕ್ಷದಿಂದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ೬೦ ರೂ ಬೆಲೆ ಇದ್ದರೂ ದೂಳು ಕಾಯಿ ಮೇಲೆ ಕುಳಿತಿರುವುದರಿಂದ ಹರಾಜು ಆಗುತ್ತಿಲ್ಲ ಇದರಿಂದ ೩ ತಿಂಗಳ ಬೆವರ ಹನಿ ಗುತ್ತಿಗೆದಾರರ ದೂಳಿನಲ್ಲಿ ಕಳೆದು ಹೋಗುತ್ತಿದ್ದರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಕೃಷಿ ಭೂಮಿಗೆ ಹಾಗೂ ಇಟ್ಟಿಗೆ ಕಾರ್ಖಾನೆಗೆ ಮಣ್ಣು ತೆಗೆಯಬೇಕಾದರೆ ನೂರೊಂದು ಕಾನೂನು ಜಾರಿ ಮಾಡುವ ಜೊತೆಗೆ ರಾಜಧನವನ್ನು ಕಟ್ಟಿಸಿಕೊಂಡು ಪರವಾನಿಗೆ ನೀಡುವ ಜೊತೆಗೆ ಮಣ್ಣು ತೆಗೆಯುವಾಗ ನೂರು ಬಾರಿ ಕೆರೆ ಪರಿಶೀಲನೆ ಮಾಡುವ ಗಣಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಚೆನೈ ಕಾರಿಡಾರ್ ಗುತ್ತಿಗೆದಾರರು ಕೆರೆಗಳನ್ನೆ ನಾಶಮಾಡುತ್ತಿದ್ದರೂ ಕೆರೆ ಕಡೆ ತಿರಗಿ ನೋಡದೆ ಮೌನವಾಗಿರುವ ಜೊತೆಗೆ ಸಂಬಂಧಪಟ್ಟ ದಾಖಲೆಗಳನ್ನು ಕೇಳಿದರೆ ಕೇಂದ್ರ ಸರ್ಕಾರದ ರಸ್ತೆ ಕಾಮಗಾರಿ ಅಲ್ಲಿ ಹೋದರೆ ಹುಲಿ, ಚಿರತೆಗಳು ನಮ್ಮನ್ನು ತಿಂದುಬಿಡುತ್ತವೆ ಎಂದು ತಮ್ಮ ಅಧಿಕಾರವನ್ನು ಗುತ್ತಿಗೆದಾರರಿಗೆ ಅಡ ಇಟ್ಟು, ಗುಲಾಮರಂತೆ ವರ್ತನೆ ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ನೊಂದ ರೈತ ಕಲ್ಕೆರೆ ಸತೀಶ್ ಮಾತನಾಡಿದರು. ಸಭೆಯಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ, ನಾರಾಯಣಸ್ವಾಮಿ, ಮುಂತಾದವರು ಇದ್ದರು.