ಹುಲಿ ದಾಳಿಗೆ ಮಹಿಳೆ ಬಲಿ :ಅರಣ್ಯ ಇಲಾಖೆಯಿಂದ ಕುಟುಂಬಸ್ಥರಿಗೆ 3 ಲಕ್ಷರೂ. ಚೆಕ್ ವಿತರಣೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.27- ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಯೋಜನೆ, ಹೆಡಿಯಾಲ ಉಪವಿಭಾಗದ ವ್ಯಾಪ್ತಿಯ ಎನ್.ಬೇಗೂರು ವಲಯದಲ್ಲಿ ನಡೆದಿದೆ.
ದಿನಾಂಕ ಮೇ 25ರಂದು ಎನ್.ಬೇಗೂರು ಶಾಖೆಯ ಬಸವೇಶ್ವರಗುಡಿ ಗಸ್ತಿನ ಕಾಡಂಚಿನ ವ್ಯಾಪ್ತಿಯಲ್ಲಿ ಮಾಳದ ಹಾಡಿ ಗ್ರಾಮ, ಎನ್.ಬೇಗೂರು ಗ್ರಾಮದ ಚಿಕ್ಕಿ ಕೋಂ ಲೇ ಕರಿಯ ಎಂಬ ಮಹಿಳೆಯು ಜಾನುವಾರುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಸದರಿ ಮಹಿಳೆಯ ಮೇಲೆ ಹುಲಿ ದಾಳಿ ಮಾಡಿ ಕಾಡಿನೊಳಗೆ ಎಳೆದು ಕೊಂಡು ಹೋಗಿರುವುದು ಕಂಡು ಬಂದ ಮಾಹಿತಿ ಮೇರೆಗೆ ತಕ್ಷಣ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿ ಈ ಘಟನೆ ಬಗ್ಗೆ ತಪಾಸಣೆ ನಡೆಸಲಾಯಿತು. ಆದರೆ ಕತ್ತಲೆಯಾದ ಕಾರಣ ಕಾಡಿನ ಒಳಗೆ ಕಾರ್ಯ ಚರಣೆ ನಡೆಸಲು ಸಾಧ್ಯವಾಗದೆ ಇರುವುದರಿಂದ ಮರುದಿನ ದಿನಾಂಕ 26 ಬೆಳಿಗ್ಗೆ 06:00 ಗಂಟೆಗೆ ಕಾರ್ಯಚರಣೆ ಆರಂಭಿಸಿ ಕಾಡಿನ ಗಡಿ ಅಂಚಿನಿಂದ ಅಂದಾಜು 500 ಮೀಟರ್ ದೂರದಲ್ಲಿ ಗಿಡ ಗಂಟೆಗಳ ಪೆÇದೆಯೊಳಗೆ ಶವ ಇರುವುದು ಕಂಡು ಬಂದಿದೆ.
ತಕ್ಷಣ ಇದರ ಬಗ್ಗೆ ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ನಿರ್ದೇಶಕರಾದ ಪ್ರಭಾಕರನ್‍ಎಸ್, ಹಾಗೂ ಹೆಡಿಯಾಲ ಉಪ-ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ. ರವೀಂದ್ರ, ರವರಿಗೆ ಮಾಹಿತಿ ನೀಡಿಲಾಗಿ ಸದರಿ ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಇದರ ಬಗ್ಗೆ ಕಾನೂನು ಕ್ರಮ ಜರುಗಿಸುವ ಸಲುವಾಗಿ ಹುಣಸೂರು ಉಪವಿಭಾಗದ ಅರಕ್ಷಕ ಉಪಅಧಿಕ್ಷಕ ಗೋಪಾಲ ಕೃಷ್ಣ, ಸರಗೂರು ಅರಕ್ಷಕ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್, ಹೆಚ್.ಡಿಕೋಟೆ ಅರಕ್ಷಕ ವೃತ್ತ ನಿರೀಕ್ಷಕ ಸಬ್ಬಿರ್ ಹುಸೇನ್, ಅಂತರಸಂತೆ ಠಾಣೆ ಆರಕ್ಷಕ ಉಪ ನಿರೀಕ್ಷಕಶೇಕರಪ್ಪರವರಿಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಬೇಟಿ ನೀಡಿ ಮಹಜರ್ ಕ್ರಮ ಜರುಗಿಸಿ ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆ, ಹೆಚ್.ಡಿ.ಕೋಟೆ ಇಲ್ಲಿಗೆ ಸಾಗಿಸಲಾಗಿರುತ್ತದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹದ ಅಂಗಾಂಗಳ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ನಿರ್ದೇಶಕರಾದ ಪ್ರಭಾಕರನ್‍ಎಸ್. ರವರು ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿರುತ್ತಾರೆ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಮಾಳದ ಹಾಡಿ ಜನತೆಗೆ ತಿಳಿಸಿ ಹಾಗೂ ಕಾಡಂಚಿನ ಗ್ರಾಮದವರು ಎಚ್ಚರಿಕೆಯಿಂದ ಇರಲು ತಿಳಿಸಿ ಇಲಾಖಾ ವತಿಯಿಂದ 3 ಲಕ್ಷದ ಚೆಕ್‍ನ್ನು ಮೃತ ಮಹಿಳೆಯ ಮಕ್ಕಳಾದ ಮಹದೇವ ಹಾಗೂ ರಾಧಿಕರವರಿಗೆ ವಿತರಣೆ ಮಾಡಲಾಯಿತು.
ಮಾಳದ ಹಾಡಿ ಗ್ರಾಮದ ಜನತೆಗೆ ಕಾಡಿನ ಒಳಗೆ ಯಾರು ಪ್ರವೇಶ ಮಾಡದಂತೆ ಹೆಡಿಯಾಲ ಉಪ-ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರರವರು ಮನವಿ ಮಾಡಿ, ಸದರಿ ಹುಲಿಯ ಚಲನವಲನವನ್ನು ಗಮನಿಸಲು 40 ಸುಸರ್ಜಿತ ಕ್ಯಾಮೆರಾಗಳನ್ನು ಘಟನೆ ನಡೆದ ಸುತ್ತಮುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದು, ಹುಲಿಯ ಚಲನ-ವಲನಗಳನ್ನು ಗಮನಿಸಿ ಇಲಾಖಾ ಮೇಲಾಧಿಕಾರಿಗಳಗೆ ವರದಿ ಮಾಡಲಾಗುವುದೆಂದು ತಿಳಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ನಿರ್ದೇಶಕರಾದ ಪ್ರಭಾಕರನ್ ಎಸ್, ಹೆಡಿಯಾಲ ಉಪ-ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ, ಎನ್.ಬೇಗೂರು ವಲಯದ ಅರಣ್ಯಾಧಿಕಾರಿ ಮಂಜುನಾಥ ಬಾಗೇವಾಡಿ, ಮೊಳೆಯೂರು ವಲಯ ವಲಯ ಅರಣ್ಯಾಧಿಕಾರಿ ಕು.ಅಮೃತ ಮಯಪ್ಪನವರ್, ಕಲ್ಕೆರೆ ವಲಯದ, ವಲಯ ಅರಣ್ಯಾಧಿಕಾರಿ ಪುನೀತ್‍ಕುಮಾರ್, ಈ ಕಾರ್ಯ ಚರಣೆಯಲ್ಲಿ ಹಾಜರಿದ್ದರು,