ತಾಳಿಕೋಟೆಯಲ್ಲಿ ಗಂಟೆಕಾಲ ಸುರಿದ ರಭಸದ ಮಳೆ
ತಾಳಿಕೋಟೆ:ಮೇ.27: ಪಟ್ಟಣದಲ್ಲಿ ರವಿವಾರರಂದು ರಾತ್ರಿ 7.20 ಗಂಟೆಯಿಂದ 8.20 ಗಂಟೆಯವರೆಗೆ ಸುಮಾರು 1 ಗಂಟೆ ಕಾಲ ರಬಸದಿಂದ ಗಾಳಿ ಸಹೇತ ಮಳೆಯಾಗಿದೆ.
ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ರಬಸದ ಮಳೆಯು ತಂಪೆರೆಯುವದರೊಂದಿಗೆ ರೈತಾಪಿ ಜನತೆಯ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ. ಗುಡುಗನೊಂದಿಗೆ ಪ್ರಾರಂಭಗೊಂಡ ರಬಸದ ಗಾಳಿ ಸುಮಾರು 1 ಗಂಟೆಕಾಲ ಬೀಸಿತಲ್ಲದೇ ನಂತರ ರಬಸದ ಮಳೆಯೊಂದಿಗೆ ಗಾಳಿಯು ಬೀಸುತ್ತಾ ಬಿಸಿಲಿನ ಧಗೆಃಯಿಂದ ಕಂಗೆಟ್ಟಿದ್ದ ಜನತೆಗೆ ತಂಪಾದ ವಾತಾವರಣ ನಿರ್ಮಾಣ ಮಾಡಿತು. ಈಗಾಗಲೇ ರೈತಾಪಿ ಜನರು ತಮ್ಮ ತಮ್ಮ ಜಮೀನಿನಲ್ಲಿಯ ಭೂಮಿಯನ್ನು ಹದಗೊಳಿಸುವದರೊಂದಿಗೆ ಬಿತ್ತನೆ ಬೀಜ ಖರೀದಿಯ ಭಟಾರೆಯಲ್ಲಿರುವ ರೈತಾಪಿ ಜನತೆಗೆ ಇಂದು ಸುರಿದ ಮಳೆಯು ಸ್ವಲ್ಪು ಸಂತಸವನ್ನುಂಟು ಮಾಡಿತಲ್ಲದೇ ಮಳೆ ಆಗಮಿಸುವ ಆಶಾಭಾವನೆಯನ್ನು ಹೆಚ್ಚಿಸಿತು. ಗಂಟೆ ಕಾಲ ಮಳೆ ಸುರಿದಿದ್ದು ಮಳೆಯಿಂದ ಮತ್ತು ಗಾಳೆಯಿಂದ ಹಾನಿಯಾದ ಬಗ್ಗೆ ಯಾವುದೇ ವರಧಿಯಾಗಿಲ್ಲಾ.