ಜ್ಞಾನದ ಹಸಿವು ಸಾಧನೆಗೆ ಪ್ರೇರಣೆ: ಕ್ರಾಂತಿಕುಮಾರ ಸಿರ್ಸೆ
ಭಾಲ್ಕಿ:ಮೇ.27:ನಿರಂತರ ಓದಿನ ಮೂಲಕ ಹೆಚ್ಚೆಚ್ಚು ಜ್ಞಾನ ಸಂಪಾದಿಸಬೇಕು ಎಂಬ ಹಸಿವು ವಿದ್ಯಾರ್ಥಿಗಳಿಗೆ ಸಾಧನೆಗೆ ಪ್ರೇರೇಪಿಸುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಔಷಧ ಮತ್ತು ವಿಜ್ಞಾನ ಪರಿಷತ್ ನ ನೋಂದಣಾಧಿಕಾರಿ ಕ್ರಾಂತಿಕುಮಾರ ಸಿರ್ಸೆ ಹೇಳಿದರು.
ಇಲ್ಲಿಯ ಭಾಲ್ಕೇಶ್ವರ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನಿ ಅವರು ಮಾತನಾಡಿದರು.
ಸಾಧನೆ ಎಂಬುದು ಸಾಧಕರು ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಬೇಕಿರುವುದು ಆತ್ಮವಿಶ್ವಾಸ, ಅಚಲ ನಂಬಿಕೆ.ಹಾಗಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.
ಶಾಲೆಯಲ್ಲಿ ಪ್ರತಿದಿನ ಶಿಕ್ಷಕರ ಪಾಠ ಬೋಧನೆಗಳನ್ನು ಶ್ರದ್ಧೆ, ಏಕಾಗ್ರತೆ, ಆಸಕ್ತಿಯಿಂದ ಆಲಿಸಬೇಕು ಎಂದು ತಿಳಿಸಿದರು.
ಇಳಕಲ್ ಸಾರಿ ಸೆಂಟರ್ ನ ಮಾಲೀಕ ವಿಜಯಕುಮಾರ ಸಜ್ಜನ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳು
ಇಳಕಲ್ ಸಾರಿ ಸೆಂಟರ್ ನ ಮಾಲೀಕ ವಿಜಯಕುಮಾರ ಸಜ್ಜನ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳ ಏಳಿಗೆಯೇ ಶಿಕ್ಷಕರ ಸಾಧನೆ ಎಂಬುದನ್ನು ಅರಿಯಬೇಕು.
ಭಾಲ್ಕೇಶ್ವರ ಪ್ರೌಢ ಶಾಲೆಯಲ್ಲಿ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಅಭ್ಯುದಯವೇ ಶಾಲೆಯ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಶಿವಕುಮಾರ ಪಾಟೀಲ, ಪಾಲಕರ ಪ್ರತಿನಿಧಿ ಶಿವಶಂಕರ ಶೀಲವಂತ ಮಾತನಾಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 619, 606 ಅಂಕ ಪಡೆದು ಶಾಲೆಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ವೈಷ್ಣವಿ ಶಿವಶಂಕರ, ಪ್ರೇಮ ಸಂತೋಷ ಅವರಿಗೆ ತಲಾ ಐದು ಸಾವಿರ ರೂಪಾಯಿ ನಗದು, ಮೊಮೆಂಟೊ, ಪ್ರಮಾಣ ಪತ್ರ ನೀಡಿ ನೋಂದಣಾಧಿಕಾರಿ ಕ್ರಾಂತಿಕುಮಾರ ಸಿರ್ಸೆ ಸನ್ಮಾನಿಸಿದರು.
ಉದ್ಯಮಿ ವಿಜಯಕುಮಾರ ಸಜ್ಜನ ಅವರು ಸಾಧಕ ವಿದ್ಯಾರ್ಥಿಗಳಿಗೆ ಕ್ರಮವಾಗಿ 5511, 2500 ರೂಪಾಯಿ ನಗದು ಬಹುಮಾನ ನೀಡಿ ಪೆÇ್ರೀತ್ಸಾಹಿಸಿದರು.
ಪ್ರಮುಖರಾದ ಶಿವಶರಣಯ್ಯಾ ಸ್ವಾಮೀ, ಗೋವಿಂದರಾವ್ ಭಾಲ್ಕೆ, ವಿಜಯಕುಮಾರ ಭುಸಗುಂಡೆ, ಸಂತೋಷ ದೇವಪ್ಪಾ, ವಿಜಯಕುಮಾರ ಕುಂಬಾರ, ಕುಪೇಂದ್ರ ಜಗಶೆಟ್ಟೆ, ಸಿದ್ರಾಮಪ್ಪ ಚಳಕಾಪೂರೆ, ಮುಖ್ಯಶಿಕ್ಷಕ ಬಾಲಾಜಿ ಬಿರಾದಾರ, ಸುನಿತಾ ಸಂಗೋಳಗೆ, ಶಿವಕಾಂತ, ಚೈತನ್ಯ ಇದ್ದರು.