560 ಕೆ.ಜಿ.ಪಡಿತರ ಅಕ್ಕಿ ಜಪ್ತಿ
ಕಲಬುರಗಿ,ಮೇ.26-ಸರ್ಕಾರದ ವಿವಿಧ ಯೋಜನೆಗಳಿಗೆ ಪೂರೈಕೆಯಾಗುವ ಪಡಿತರ ಅಕ್ಕಿಯನ್ನು ಟಂಟಂನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ಭಾರತಿ ಪಾಟೀಲ ಮತ್ತು ಸಿಬ್ಬಂದಿ ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದು ಪಡಿತರ ಅಕ್ಕಿ ಮತ್ತು ಟಂಟಂ ಜಪ್ತಿ ಮಾಡಿದ್ದಾರೆ.
ನಗರದ ವಿಶ್ವವಿದ್ಯಾಲಯ ಗೇಟ್ ಎದರುಗಡೆ ಚಿತ್ತಾಪುರ ತಾಲ್ಲೂಕಿನ ನಾಗಾವಿ ಚೌಕ್ ಭೂವಿಗಲ್ಲಿ ನಿವಾಸಿ ಮೋಸಿನ್ ಸುಲೇಮಾನ್ ಜೀವಣಗಿ (34) ಎಂಬಾತನನ್ನು ವಶಕ್ಕೆ ಪಡೆದು 17000 ರೂ.ಮೊತ್ತದ 560 ಕೆ.ಜಿ.ಅಕ್ಕಿ ಮತ್ತು 80 ಸಾವಿರ ರೂ.ಮೊತ್ತದ ಟಂಟಂ ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.