ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ದಾರಿ ದೀಪ:ಬಸಯ್ಯಸ್ವಾಮಿ
ಯಡ್ರಾಮಿ:ಮೇ.26:ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ದಾರಿ ದೀಪವಾಗುವುದು ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಬಸಯ್ಯಸ್ವಾಮಿ ಕಕ್ಕೇರಾ ಅವರು ವ್ಯಕ್ತಪಡಿಸಿದರು.
ಪಟ್ಟಣದ ಕ್ರಾಂತಿ ಕೋಚಿಂಗ್ ಕ್ಲಾಸಸ್ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ.ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು ಆಗ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯವಾಗುವುದು ಎಂದು ನುಡಿದರು.
ಅಂತಹ ಉತ್ತಮ ಕಾರ್ಯ ಈ ಕ್ರಾಂತಿ ಸಂಸ್ಥೆ ಮಾಡುತ್ತಿದೆ.ಇಂತಹ ಸಂಸ್ಥೆಗಳ ಉಪಯೋಗ ಪಾಲಕರು ಪಡೆದುಕೊಂಡು ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಬೇಕು ಎಂದು ಹೇಳಿದರು.
ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ.ಉತ್ತಮ ಶಿಕ್ಷಣ ಪಡೆದುಕೊಂಡು ದೇಶದ ಆಸ್ತಿವಂತರಾಗಬೇಕು ಎಂದು ಮಕ್ಕಳ ಸಲಹೆ ನೀಡಿದರು.ಆ ಮಾರ್ಗದಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಕೆಲಸಾ ಮಾಡಬೇಕು ಎಂದು ನುಡಿದರು.
ಈ ಸಂಸ್ಥೆ ಮತ್ತು ತರಬೇತಿ ಪಡೆದುಕೊಂಡ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಂಡು ದೇಶ ಕಟ್ಟುವಂತ ತರಬೇತಿ ಸಂಸ್ಥೆಯಾಗಿ ಬೆಳೆಯಬೇಕು ಎಂದು ಹಾರೈಸಿದರು.
ಪ್ರಭುಗೌಡ ದೇಸಾಯಿ ಶಿಕ್ಷಣ ಸಂಯೋಜಕರು ಪ್ರೌಡ ಶಾಲೆ ವಿಭಾಗ ಯಡ್ರಾಮಿ ಅವರು ಮಾತನಾಡಿ.ಹಿಂದುಳಿದ ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಜೊತೆಗೆ ಬೇಸಿಗೆಯಲ್ಲಿಯು ಕೂಡ ಕಲಿಕೆಯ ನಿರಂತರತೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ತರಬೇತಿಯ ಸಂದರ್ಭದಲ್ಲಿ ಹಲವಾರು ಚಟುವಟಿಕೆಯ ಕೈಗೊಡು ವಿದ್ಯಾರ್ಥಿಗಳಿಗೆ ಪುರಸ್ಕಾರ ಪತ್ರ ವಿತರಣೆ ಮಾಡಿ ಮಕ್ಕಳಿಗೆ ಪೆÇ್ರೀತ್ಸಾಹಿಸುವ ಕಾರ್ಯ ಮಾಡಲಾಯಿತ್ತು.
ಈ ಸಂದರ್ಭದಲ್ಲಿ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ, ಪ್ರಭುಲಿಂಗ ದೇಸಾಯಿ, ಬಾಬಾ ಫರೀದ್ ಮಳ್ಳಿಕರ್, ಶರಣಯ್ಯ ಚಿಕ್ಕಮಠ,ಬಸವರಾಜ ಬಂಡಿ, ಬಸಯ್ಯಸ್ವಾಮಿ ಕಕ್ಕೇರಾ,ಬಸವರಾಜ ಉಪ್ಪಾರ,ಪಾಲಕರು ಹಾಗೂ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು. ಬಂಗಾರಯ್ಯ ಹೀರೆಮಠ ನಿರೂಪಿಸಿದರು, ಲಕ್ಷ್ಮಿ ಸುಂಬಡ ಸ್ವಾಗತಿಸಿದರು, ಶೀತಲ್ ಎಂ ರಾಮನೂರ ವಂದಿಸಿದರು.
ಬೇಸಿಗೆಯಲ್ಲಿಯೂ ಕೂಡ ಕ್ರಾಂತಿ ಸಂಸ್ಥೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅದರ ಜೋತೆಗೆ ಪುರಸ್ಕಾರ ನೀಡಿ ಪೆÇ್ರೀತ್ಸಾಹಿಸುವ ಕಾರ್ಯ ಮಾಡಲಾಯಿತ್ತು.