ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ
ಚಿಟಗುಪ್ಪ ,ಮೇ 26: ತಾಳಮಡುಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರಿಗೆ ಚಾಕುನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ತೆಲಂಗಾಣರಾಜ್ಯದ ಹೈದರಾಬಾದ್ ನಿವಾಸಿ ಮಲ್ಲಿಕಾರ್ಜುನ್ ಗೋಪಾಲ್‍ರಾವ್ (52) ಕೊಲೆಯಾದವರು. ಮೃತವ್ಯಕ್ತಿ ಬಿಲ್ಡರ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು,ಶುಕ್ರವಾರ ಮಹಾರಾಷ್ಟ್ರದ ಉಮ್ಮರ್ಗಾಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿದ್ದಾರೆ. ತಮ್ಮ ಸ್ವಂತ ಕಾರಿನಲ್ಲಿ ಶನಿವಾರ ಮರಳಿ ಹೈದರಾಬಾದಿಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 65 ರ ಮೇಲಿರುವ ತಾಳ್ಮಡಗಿ ಗ್ರಾಮದ ಹೊರವಲಯದ ಸಾಯಿಬಾಬ ದಾಬ ಹತ್ತಿರ ಕೊಲೆಯಾಗಿದೆ. ಮಲ್ಲಿಕಾರ್ಜುನ್ ಅವರಿಗೆ ದೇಹದ 33 ಕಡೆ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ .ಮನ್ನಾ ಯಖೇಳಿಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.