ಮಾಜಿ ಸಚಿವ ಎಚ್. ಆಂಜನೇಯ ಅವರಿಗೆ ಎಂಎಲ್ಸಿ ಸ್ಥಾನ ನೀಡಿ
ವಿಜಯಪುರ,ಮೇ.26: ಮಾಜಿ ಸಚಿವ ಎಚ್. ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಅಖಿಲ ಕರ್ನಾಟಕ ಮಾದಿಗರ ಒಕ್ಕೂಟದ ವಿಜಯಪುರ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸಭೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಾಖಂಡಕಿ ಮಾತನಾಡಿ, ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಅವರನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಶಾಸನಸಭೆಗಳಲ್ಲಿ ದಲಿತ ಹಾಗೂ ಹಿಂದುಳಿದ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕಿದೆ. ಎಚ್.ಆಂಜನೇಯ ಅಹಿಂದ ವರ್ಗದ ಖಾಯಂ ಧ್ವನಿಯಾಗಿದ್ದಾರೆ, ಮಾಜಿ ಸಚಿವ ಎಚ್. ಆಂಜನೇಯ ಎಂದೂ ಯಾವ ಹುದ್ದೆಯನ್ನೂ ಅಪೇಕ್ಷೆ ಪಟ್ಟಿಲ್ಲ, ಅವರ ಅಭಿಮಾನಿಗಳು, ದಲಿತ ಸಮುದಾಯದ ಸಂಘಟನೆಗಳು ವಿಜಯಪುರ ಜಿಲ್ಲೆಯಿಂದ ಧ್ವನಿ ಎತ್ತಿದ್ದೇವೆ. ಕಾಂಗ್ರೆಸ್ ಪರಿಷ್ಠರಿಗೆ ಇದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಿದ್ದೇವೆ. ರಾಜ್ಯದ ಎಲ್ಲೆಡೆ ಇರುವ ಅವರ ಅಭಿಮಾನಿಗಳು ಪಕ್ಷದ ನಾಯಕರ ಗಮನ ಸೆಳೆಯಲಿದ್ದಾರೆ ಎಂದು ಹೇಳಿದ್ದರು.
ದೇವದಾಸಿ ತಾಯಂದಿರಿಗೆ ತಿಂಗಳ ಮಾಶಾಸನ, ದೇವದಾಸಿ ತಾಯಂದಿರ ಮಕ್ಕಳಿಗೆ ಮದುವೆಗೆ ಪೆÇ್ರೀತ್ಸಾಹ ಧನ,ಹೆಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪೆÇ್ರೀತ್ಸಾಹ ನೀಡಲು ಯೋಜನೆ ಜಾರಿಗೆ ತಂದವರು ಮತ್ತು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನಗಳು ನಿರ್ಮಾಣ, ಅಭಿವೃದ್ಧಿ ನಿಗಮಗಳಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ ಶ್ರೇಯಸ್ಸು ಆಂಜನೇಯ ಅವರಿಗೆ ಇದೆ. ಹೀಗಾಗಿ ಈ ಶಕ್ತಿಯನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಮಾದಿಗರ ಮಹಾಸಭಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೃಷ್ಣ ರತ್ನಾಕರ ಹಾಗೂ ಸುನೀಲ ಸಂದ್ರಿಮನಿ, ಶ್ರೀಶೈಲ ರತ್ನಾಕರ, , ಮಲ್ಲು ಶೇಷಗಿರಿ, ಧರ್ಮಣ್ಣ ಮಾದರ, ಸಿದ್ದು ಹೊಸಮನಿ, ಪರಶುರಾಮ ಕಟ್ಟಮನಿ, ರಘು ಬಲ್ಯಾಳ, ಸಿದ್ದು ಮಾದರ, ಕೃಷ್ಣ ಕೆಂಗಲಗುತ್ತಿ, ದಶರಥ ವಜ್ರಮಟ್ಟಿ, ಸದಾಶಿವ ಬಬಲಾದಿ,ಶಿವಾಜಿ ನಂದ್ಯಾಳ ಅವರು ಪಾಲ್ಗೊಂಡಿದರು.