ದೇವರು ನಿರ್ಮಲವಾದ ಭಕ್ತಿ ಬಯಸುತ್ತಾನೆ : ಬಸವರಾಜ ಕೇಶಪ್ಪನಟ್ಟಿ
ವಿಜಯಪುರ:ಮೇ.26: ಸಿರಿ ಸಂಪತ್ತು, ಧನ ಕನಕ ಯಾವುದನ್ನು ಬಯಸದ ದೇವರು ನಮ್ಮಿಂದ ನಿರ್ಮಲವಾದ ಭಕ್ತಿಯನ್ನು ಮಾತ್ರ ಬಯಸುತ್ತಾನೆ ಎಂದು ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಕೀರ್ತನಕಾರ ಬಸವರಾಜ ಕೇಸಪ್ಪನಟ್ಟಿ ಹೇಳಿದರು.
ಅವರು ತಿಕೋಟಾ ತಾಲೂಕಿನ ಸಿದ್ದಾಪುರ ಕೆ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಐದು ದಿನಗಳ ಕಾಲ ನಡೆಯುವ ನರಸಿಂಹ ದೇವರ ಜಯಂತಿ ಅಂಗವಾಗಿ ವಾರಕರಿ ಸಂತ ಸಂಪ್ರದಾಯದಂತೆ ಜರುಗಿದ ಕೀರ್ತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣವನ್ನು ಇವರು ನಾಡಿನ ತುಂಬೆಲ್ಲ ಮಾಡುತ್ತ ಬಂದಿದ್ದು ನಾಲ್ಕು ತಲೆಮಾರುಗಳಿಂದ ಈ ಸೇವೆ ನಿರಂತರವಾಗಿ ಸಾಗಿ ಬಂದಿದ್ದು ವಿಶೇಷ ಮಹಾಭಾರತ ರಾಮಾಯಣ ಸೇರಿದಂತೆ ವಿವಿಧ ಆಧ್ಯಾತ್ಮಿಕ ವಿಷಯವನ್ನು ಮನ ಮುಟ್ಟುವಂತೆ ನಿರೂಪಿಸುವ ಇವರು ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ಅತಿಶಯೋಕ್ತಿ ಏನಲ್ಲ ಶಿವಲಿಂಗ ಖೋತ ಶ್ರೀಶೈಲ ಮೈಶಾಳ ಸುರೇಂದ್ರ ಖೋತ ಅಪ್ಪಾಸಾಬ ಭೋಸಲೆ ಸದಾಶಿವ ಮಂಗಸೂಲಿ ಸೋಮಶೇಖರ ಜತ್ತಿ, ಚನ್ನಯ್ಯ ಸಾಲಿಮಠ ರಾವಸಾಬ ಖೋತ ಸಂತೋಷ ನಿಡೋಣಿ ಸೇರಿದಂತೆ ಮುಂತಾದವರು ಇದ್ದರು.