ಮೌಲ್ಯಾಧರಿತ ಶಿಕ್ಷಣವೇ ಪರಮ ಶ್ರೇಷ್ಠ: ಸಂಗಮೇಶ ಚೂರಿ
ವಿಜಯಪೂರ:ಮೇ.26:ಇಂದಿನ ಆಧುನಿಕತೆಯ ಬರಾಟೆಯಲ್ಲಿ ನಾವು ಮೌಲ್ಯ ಶಿಕ್ಷಣವನ್ನು ಮರೆಯಬಾರದು. ಇಂದಿನ ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಕೇವಲ ಅಂಕಗಳಿಗೆ ಬೆನ್ನುಹತ್ತದೆ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಪೂರಕವಾಗುವ ಶಿಕ್ಷಣವನ್ನ ಒದಗಿಸಬೇಕು ಎಂದು ಜಿಲ್ಲಾ ಕಾನಿಪ ಅಧ್ಯಕ್ಷ ಸಂಗಮೇಶ ಚೂರಿ ಅಭಿಮತ ವ್ಯಕ್ತಪಡಿಸಿದರು.
ಅವರು ಇಂದು ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.