ವಿಶ್ವಕ್ಕೆ ಶಾಂತಿ ನೀಡಿದ ಮೊದಲ ಗುರು ಗೌತಮ ಬುದ್ಧ: ಶಿವಕುಮಾರ ನೀಲಿಕಟ್ಟೆ
ಬೀದರ :ಮೇ.26:ನಗರದ ಡಾ|| ಬಿ. ಆರ್ ಅಂಬೇಡ್ಕರ ಕಮಾನ ಹತ್ತಿರ ಇರುವ ಕರುನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಗಿಲಾವ ಕಾರ್ಮಿಕರ ಸಂಘ ಬೀದರ ಕಾರ್ಯಲಯದಲ್ಲಿ ಆಯೋಜಿಸಿದ 2568 ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ದಲಿತ ಸಂಘರ್ಷ ಸಮಿತಿ ಕರ್ನಾಟಕ ಜಿಲ್ಲಾ ಸಂಚಾಲಕ ಶಿವಕುಮಾರ ನಿಲಿಕಟ್ಟಿ ಮಾತನಾಡಿ,ಮಾನವ ಜೀವ ಜಗತ್ತು ಭೂಮಿಗೆ ಬುದ್ಧ ಶಾಂತಿ ಸಂದೇಶ ಕೊಟ್ಟಿದ್ದಾನೆ, ಬುದ್ಧ ಇದ್ದಲ್ಲಿ ಯುದ್ದವಿಲ್ಲ ಎನ್ನುವ ಮಾತು ಸತ್ಯ ನಿತ್ಯವಾಗಿದೆ. ತ್ರೀ ಶರಣ ಪಂಚಶೀಲ ಅಸ್ಟಂಗಾ ಮಾರ್ಗ ಮಾನವ ಕುಲ ಕಲ್ಯಾಣದ ಸೂತ್ರಗಳಾಗಿವೆ. ಸ್ವಯಂ ಪ್ರಕಾಶತೆ, ಬುದ್ಧನ ಮಾತು ಮನುಷ್ಯ ಜೀವನಕ್ಕೆ ಸಂಜೀವಿನಿ ಸ್ವಾಭಿಮಾನ, ಘನತೆ ಗೌರವ ಹೆಚ್ಚಿಸುವ ನುಡಿಯಾಗಿದೆ. ನುಡಿಯಾಗಿ ನಡೆಯಾಗಿ ನಡಾವಳಿಯಾಗಿ ನಾವು ಜೀವನದಲ್ಲಿ ಅಳವಡಿಸಿಕೊಂಡಾಗ, ಶಾಂತಿ ಸಮೃದ್ಧಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಬುದ್ಧ ಹೇಳಿದ ಸರಳ ತತ್ವ ಜಾತಿ ಧರ್ಮ ಮೀರಿ ಮಾನವರು ಅಳವಡಿಸಿಕೊಂಡಾಗ, ದೇಶ, ವಿಶ್ವದಲ್ಲಿ ಶಾಂತಿಯ ಸಮೃದ್ಧಿ ಶಿಖರ ಕಟ್ಟಲು ಸಾಧ್ಯವಾಗುತ್ತದೆಯೆಂದು ಎಂ ಡಿ ಇಂಬ್ರಾಹಿಮ್ ಯದ್ಲಾಪೂರ ನುಡಿದರು. ಅಧ್ಯಕ್ಷತೆ ಗಿಲಾವ ಕಾರ್ಮಿಕರ ಸಂಘದ ಅಧ್ಯಕ್ಷ ಸಂಜುಕುಮಾರ ಶಿಂಧೆ ವಹಿಸಿದರು. ಮೌಲಾ, ವಿಯಾನಂದ, ಮಾರುತಿ,ಜ್ಯಾಂತಿಕರ್, ನರಸಿಂಗ ಅಮಲಾಪೂರ, ಲಕ್ಷ??ಣ ಶಹಾಪೂರ, ಅಶೋಕ, ನರಸಿಂಗ ಚಿದ್ರಿ, ಮುಂತಾದ ಭಾಗವಹಿಸಿದರು.