ತಾಳಿಕೋಟೆಯಲ್ಲಿಯಭಾವೈಕ್ಯತೆ ಸಾರುವ ಪಂಚಸೈಯದ ದರ್ಗಾ ಉರುಸು
ತಾಳಿಕೋಟೆ:ಮೇ.26: ರಾಜ್ಯದ ಪ್ರಮುಖ ದರ್ಗಾಗಳಲ್ಲಿ ಒಂದಾದ ತಾಳಿಕೋಟೆ ಪಟ್ಟಣದಲ್ಲಿಯ ಹಜರತ್ ಫೀರ ಪಂಚಸೈಯದ ದರ್ಗಾ ಉರುಸು ದಿ.25 ಶನಿವಾರರಂದು ಭಕ್ತಿಭಾವದೊಂದಿಗೆ ಜರುಗಿತು.
ಹಬ್ಬ ಹರಿದಿನಗಳು ಜಾತ್ರೆ, ಉರುಸು, ಉತ್ಸವಗಳು ಯಾವುದೇ ಬೇದ ಭಾವವಿಲ್ಲದೇ ಆಚರಿಸಿಕೊಂಡು ಬರುವುಗಳಾಗಿದ್ದು ಅದರಂತೆ ತಾಳಿಕೋಟೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತಾ ಸಾಗಿ ಬಂದಿರುವ ಹಜರತ್ ಫೀರ್ ಪಂಚಸೈಯದ ದರ್ಗಾ ಉರುಸಿಗೆ ಆಗಮಿಸಿದ ಭಕ್ತಾದಿಗಳು ಎಡೆ, ಸಕ್ಕರೆ, ಕಾಯಿ, ಕರ್ಪೂರ, ಲೋಭಾನ, ದರ್ಗಾಕ್ಕೆ ನೀಡುವದರೊಂದಿಗೆ ಭಾವೈಕ್ಯತೆ ಮೆರೆದಿದ್ದೇನು ಕಡಿಮೇನಿಲ್ಲಾ.
ಜಾತಿ, ಧರ್ಮ, ಭಾಷೆ, ಉಡುಗೆ, ತೊಡುಗೆ ಬೇರೆಯಾದರೂ ದೇಶದಲ್ಲಿ ಏಕತೆ ಎಂಬುದು ಇದೆ ಈ ದೇಶ ಏಕತೆಯೊಂದಿಗೆ ಮುನ್ನಡೆಯುತ್ತಾ ಸಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲವಷ್ಟೇ. ದೇಶದಲ್ಲಿ ಅನೇಕ ಧರ್ಮಿಯರಿದ್ದರೂ ಆಯಾ ಧರ್ಮಗಳಲ್ಲಿ ಯಾವ ತಪ್ಪುಗಳು ಇರುವದಿಲ್ಲಾ ಕಾರಣ ಮಾನವರೆಲ್ಲರೂ ಒಂದಾಗಿ ನೆಮ್ಮಿದಿಯಿಂದ ಬಧುಕಬೇಕೆಂಬುದು ಧರ್ಮಗಳು ಹೇಳುತ್ತಾ ಸಾಗಿವೆ ನ್ಯಾಯದಿಂದ ಬಧುಕು ಸಾಗಿಸಬೇಕು ಬೇರೆಯವರ ಒಳಿತಿಗಾಗಿ ಬಧುಕಬೇಕು ಎಂಬುದನ್ನು ಧರ್ಮಗಳು ಹೇಳಿದಂತೆ ಬಿದ್ದವರನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡುತ್ತಾ ಸಾಗಬೇಕೆಂಬುದು ಎಲ್ಲ ಧರ್ಮಗಳ ಉದ್ದೇಶವಾಗಿದೆ ಎಂದು ಹೇಳಬಹುದಾಗಿದೆ.
ಬೇರೆ ಧರ್ಮವನ್ನು ಹೀಯಾಳಿಸುವದು ಬೇಡಾ ಹಿಂದೂ-ಮುಸ್ಲಿಂ ಧರ್ಮಗಳೆರಡೂ ಒಂದಾದರೆ ಸದೃಢ ದೇಶ ಕಟ್ಟಲು ಸಾದ್ಯವೆಂಬುದನ್ನು ಈ ಹಿಂದಿನಿಂದಲೂ ಪ್ರಜ್ಞಾವಂತರು ಹೇಳುತ್ತಾ ಸಾಗಿಬಂದಿದ್ದಾರಲ್ಲದೇ ಈ ಮಾತೂ ಸಹ ಹಿರಿಯರದ್ದಾಗಿದೆ ಎಂದರೆ ತಪ್ಪಾಗಲಾರದು.
ಪ್ರತಿವರ್ಷದಂತೆ ತಾಳಿಕೋಟೆಯಲ್ಲಿ ಭಾವೈಕ್ಯತೆ ಸಾರುತ್ತಾ ಸಾಗಿರುವ ಪುರಾತನ ಹಜರತ ಫೀರ ಪಂಚಸೈಯದ ದರ್ಗಾ ಉರುಸು ದಿ.24 ರಿಂದ ಪ್ರಾರಂಭಗೊಂಡು 26 ರವರೆಗೆ ತನ್ನ ಸೇವಾ ಕಾರ್ಯ ಮುಂದುವರೆಸಲಿದೆ. 24 ಶುಕ್ರವಾರ ಗಂದದ ಕಾರ್ಯವಾಗಿದ್ದು, 25 ರಂದು ಉರುಸು ವಿಜೃಂಬಣೆಯಿಂದ ಜರುಗಿತಲ್ಲದೇ ದಿ.26 ರವಿವಾರರಂದು ಪ್ರತಿವರ್ಷದಂತೆ ಜಯಾರತ ಜರುಗಲಿದೆ ಎಂದು ಹಜರತ್ ಫೀರ ಪಂಚಸೈಯದ ದರ್ಗಾ ಕಮಿಟಿ ಭಕ್ತಸಮೂಹಕ್ಕೆ ತಿಳಿಸಿದೆ.