ಭಾರತದ ಸಹಕಾರಿ ಪಿತಾಮಹ ಸಿದ್ದಣ್ಣಗೌಡ ಪಾಟೀಲ್ ಅವರ ಜನ್ಮ ದಿನಾಚಾರಣೆ
ಬೀದರ:ಮೇ.26:ಭಾರತದಲ್ಲಿ ಸಹಕಾರ ಚಳುವಳಿಯನ್ನು ಕಾನೂನುನಾತ್ಮಕವಾಗಿ ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳ ಸ್ಥಾಪಿಸಿ ಸಹಕಾರ ಪಿತಾಮರಾಗಿರುತ್ತಾರೆ. ಅವರು ಸ್ಥಾಪಿಸಿದ ಸಹಕಾರ ಸಂಘವು ಇಡಿ ದೇಶದ ಸಹಕಾರ ಚಳುವಳಿ ದಿಕ್ಕು ಬದಲಿಸಿದೆ ಎಂದು ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ನುಡಿದರು.
ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಬೀದರ ಇದರ ಕಛೇರಿಯಲ್ಲಿ ಆಯೋಜಿಸಿದ ಸಹಕಾರ ಪಿತಾಮ ಸಿದ್ದಣ್ಣಗೌಡ ಸಣ್ಣರಾಮಣ್ಣಗೌಡ ಪಾಟೀಲ್ ಅವರ ಜನ್ಮದಿನಾಚಾರಣೆಯನ್ನು ಆಚರಿಸಿ ಮಾತನಾಡಿದರು. ಗದಗ ಜಿಲ್ಲೆಯ ಕಣಗಿನ ಹಾಳ ಗ್ರಾಮದಲ್ಲಿ ಪ್ರಥಮ ಸಹಕಾರ ಸಂಘವನ್ನು ಸ್ಥಾಪಿಸಿ ಇಡಿ ದೇಶದಲ್ಲಿಯ ಮೊದಲ ಸಹಕಾರ ಸಂಘ ಸ್ಥಾಪನೆಗೆ ಕಾರಣಿಭುತರಾಗಿರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂದ ನಿರ್ದೇಶಕರಾದ ರಾಜಶೇಖರ ನಾಗಮೂರ್ತಿ,ಸಂಜಯ ಕ್ಯಾಸಾ,ಶ್ರೀಕಾಂತ ಸ್ವಾಮಿ ಸೋಲಪೂರ, ನಾಗಶೇಟಿ ಪಾಟೀಲ್ ಸುಂಕನಾಳ, ಮಾಯಾದೇವಿ ಸಿಂದನಕೇರಾ ಕಾರ್ಯದರ್ಶಿ ಅಮೃತ ಹೊಸಮನಿ, ಅಭಿವೃದ್ಧಿ ಅಧಿಕಾರಿ ವೀರಶಟ್ಟಿ ಕಾಮಣ್ಣಾ,ಸಹಕಾರಿಗಳಾದ ರಾಜಕುಮಾರ ರಾಹುಲ್ ಇತರರು ಉಪಸ್ಥಿತರಿದ್ದರು.