ವಚನಗಳು ಬದುಕಿಗೆ ದಾರಿ ದೀಪ
ಬೀದರ:ಮೇ.26:ನಂಬಿ ಕರೆದರೆ ಓ ಎನ್ನುವ ಬಸವ, ನಮ್ಮೆಲ್ಲರ ಹೃದಯದಲ್ಲಿ ನೆಲೆಗೊಳ್ಳಬೇಕು.ಇದು ಬಸವ ಪರಂಪರೆಗೆ ಎಡೆ ಮಾಡಿ ಕೊಡಬಲ್ಲದಾಗಿದೆ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು. ಹಿಪ್ಪಳಗಾಂವ ಗ್ರಾಮದ ಬಸವ ಬಳಗ ಹಾಗೂ ಅಕ್ಕನ ಬಳಗದವರು ಆಯೋಜಿಸಿದ ಸಾಂಸ್ಕøತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಅನಾವರಣ ಗೊಳಿಸಿ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡುತ್ತ ತಮ್ಮ ಗ್ರಾಮದಲ್ಲಿ ಎಲ್ಲರ ಗಮನಕ್ಕೆ ಸೆಳೆಯುವ ಮೂರ್ತಿ ಇದಾಗಿದೆ. ಯಾರಿಗೂ ತೊಂದರೆಯಾಗದೆ ಗ್ರಾಮದ ಮುಖ್ಯ ದ್ವಾರದ ಬಲಗಡೆಯಲ್ಲಿ ನಿರ್ಮಿಸಿದ ಮೂರ್ತಿ ಹೊಸ ಭರವಸೆ ಮೂಡಿಸಿದೆ.