ಎಸ್ ಎಸ್ ಎಲ್‍ಸಿ ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ
ಬೀದರ್:ಮೇ.26: ಔರಾದ್ ತಾಲ್ಲೂಕಿನ ವನಮಾರಪಳ್ಳಿ ಗ್ರಾಮದಲ್ಲಿ ಭಾಗ್ಯವತಿ ಗ್ರಾಮೀಣ ಕಲಾ, ಸಾಂಸ್ಕøತಿಕ ಸೇವಾ ಸಂಘದ ವತಿಯಿಂದ ಪ್ರಸಕ್ತ ಸಾಲಿನ ಎಸ್ ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ನಾಗಮ್ಮ ಧನಾಜಿ, ಸಾಕ್ಷಿ ಶಿವಕುಮಾರ, ಲಕ್ಷ್ಮಿ ಅನಿಲಕುಮಾರ, ಸಂತೋಷಿ ರಾಜಕುಮಾರ, ಸೋನಿ ಪಂಢರಿ ಅವರನ್ನು ಶಾಲು ಹೊದಿಸಿ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಮಾರ್ಗದರ್ಶನ ಹಾಗೂ ಪೆÇ್ರೀತ್ಸಾಹದ ಅಗತ್ಯವಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವರಾಜ ಮಲಗೆ ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ತಂದೆ-ತಾಯಿ, ಶಿಕ್ಷಕರು ಹಾಗೂ ವಿದ್ಯೆ ಕಲಿತ ಶಾಲೆಗೆ ಗೌರವ ತರಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಶೋಭಾವತಿ ಶಿವರಾಜ, ಪೂಜಾ ಅನಿಲಕುಮಾರ, ಸರೋಜನಾ ಸುನೀಲಕುಮಾರ ಇದ್ದರು.