ವಿಶ್ವ ಸಹೋದರರ ದಿನ ಆಚರಣೆ
ವಿಜಯಪುರ:ಮೇ.26:ಇಂದು ಸಂಕುಚಿತ ಭಾವನೆಯಿಂದ ನಮ್ಮ ಸಮಾಜದಲ್ಲಿ ಅಜ್ಜ-ಅಜ್ಜಿ, ತಂದೆ-ತಾಯಿ, ಅಣ್ಣ-ತಂಗಿ ಮತ್ತು ಕುಟುಂಬದ ಸದಸ್ಯರಲ್ಲಿನ ಅನ್ಯೋನ್ಯತೆ, ಸಂಬಂಧ, ಪ್ರೀತಿ-ವಾತ್ಸಲ್ಯ, ಅವಿನಾಭಾವ ಸಂಬಂಧ ಮತ್ತು ಕೌಟುಂಬಿಕ ಸಾಮರಸ್ಯತೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವ ಅಣ್ಣ-ತಮ್ಮಂದಿರ ದಿನದ ಅಂಗವಾಗಿ ನಗರದ ಎನ್.ಜಿ.ಓ. ಕಾಲನಿಯಲ್ಲಿ ಸಮರ್ಥ ಮತ್ತು ಸಾನ್ವಿ ಖೊದ್ನಾಪೂರ ಅವರು ಸಹೋದರರ ದಿನ ಆಚರಿಸಿದರು. ಜನರಲ್ಲಿ ಕೂಡು ಕುಟುಂಬದ ಪರಿಕಲ್ಪನೆಯೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಬೇಕೆಂಬ ಉದ್ಧೇಶ ಈ ದಿನದ ಆಚರಣೆಯಾಗಿದೆ.