ಉತ್ತಮ ಶಿಕ್ಷಕರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಮಂಡ್ಯ:ಸೆ.24-ನಗರದ ಪಿ.ಇ.ಎಸ್ ವಿಜ್ಞಾನ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ (ರಿ), ಮಂಡ್ಯ,ಇವರ ವತಿಯಿಂದ ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ದಿ. ಪುಟ್ಟತಾಯಮ್ಮ ಹಾಗೂ ದಿ.ಎಂ.ಕೆ. ರಾಮಲಿಂಗೇಗೌಡ ಸ್ಮಾರಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವು ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಟಿ.ಸದಾಶಿವಭಟ್ (ಅಣ್ಣಯ್ಯ) ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ನಗರಸಭಾ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ರವರು ಉದ್ಘಾಟಿಸಿದರು.ದತ್ತಿ ಪ್ರಶಸ್ತಿಗೆ ಭಾಜನರಾದ ಕಲ್ಮಂಜೆ ರಮೇಶ್ ಆಚಾರ್ಯ,ಮಾಲೀಕರು, ಹೋಟೆಲ್ ಹರಿಪ್ರಿಯ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಉತ್ತಮ ಶಿಕ್ಷಕಿ ಪದ್ಮ ವಿ.ಟಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಗ್ಗಹಳ್ಳಿ, ಸಂಗೀತ ಶಿಕ್ಷಕಿ, ಸುಸ್ವರ ಸಂಗೀತ ಶಾಲೆಯ ಮುಖ್ಯಸ್ಥರಾದ ರಾಧಿಕಾ ರಾವ್, ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಎಂ. ಮಣಿಮಾಲಾರವರನ್ನು ಅಭಿನಂದಿಸಲಾಯಿತು.
ಅತಿ ಹೆಚ್ಚು ಅಂಕವನ್ನು ಪಡೆದ ಸಾನ್ವಿ ಜಿ.ಶೆಟ್ಟಿ,ಚರಣ್ ಪ್ರಭಾಕರ್ ಗಾಂವ್ಕರ್, ಟಿ.ಪವನ್ ಹತ್ವಾರ್, ದಿಶಾ ಎಸ್ ಶೆಟ್ಟಿರವರನ್ನು (ಎಲ್ಲರೂ ಸಹಾ ಎಸ್‍ಎಸ್‍ಎಲ್‍ಸಿ) ಅಭಿನಂದಿಸಲಾಯಿತು.ಪಿಯುಸಿ ವಿಭಾಗದಲ್ಲಿ ಆರ್. ಪ್ರಣಮ್ಯ, ಬಿ ರಮಾನಾಥ ಪೈ, ಎಸ್.ಸಾನ್ವಿ ಶೆಟ್ಟಿ, ಸಿ.ವಿಕಾಸ್, ಆರ್.ಕೃಷ್ಣ ಸಾರಥಿ, ಎಸ್. ದಕ್ಷಿತಾರವರನ್ನು ಅಭಿನಯಿಸಲಾಯಿತು.ಬಿಕಾಂನ ಕೀರ್ತನಾ ಕೆ., ಇಂಟರ್ಮೀಡಿಯಟ್ ನ ಸಿ.ಎ. ಗುರುದತ್, ಕರಾಟೆ ಎಲ್ಲೋ ಬೆಲ್ಟ್ ನ ಪೂರ್ವಿ ಎಸ್, ಶೆಟ್ಟಿರವರನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಕಟಪಾಡಿಯ ಪ್ರಥಮ್ ಮ್ಯಾಜಿಕ್ ವಲ್ರ್ಡ್ ನ ತಂಡದವರು ಮ್ಯಾಜಿಕ್ ಶೋ ಹಾಗೂ ಮನು ಹಂದಾಡಿರವರು ನಗೆಹನಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಖ್ಯಾತ ಮಕ್ಕಳ ತಜ್ಞರಾದ ಡಾ. ಬಿ.ಎಂ. ಜಗದೀಶ್ ಕುಮಾರ್, ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಗೌರವಾಧ್ಯಕ್ಷರಾದ ಎಸ್. ಶ್ರೀನಿವಾಸ ಶೆಟ್ಟಿ, ಒಕ್ಕೂಟದ ಖಜಾಂಚಿ ಜಿ.ಕೆ. ಶೆಣೈ ಹಾಗೂ ಇನ್ನಿತರರಿದ್ದರು.