ಹೆಲ್ತ್ ಕೇರ್ ಕಾರ್ಯಾಗಾರ
ಸಂಜೆವಾಣಿವಾರ್ತೆ
ಹರಪನಹಳ್ಳಿ, ಮೇ.26: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ತ್ ಕೇರ್ ಕುರಿತು ಎರಡು ದಿನಗಳ ಕಾಲ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಡಿವೈಎಸ್‍ಪಿ ವೆಂಕಟಪ್ಪನಾಯಕರವರ ಮಾರ್ಗದರ್ಶನದಲ್ಲಿ ಕಾರ್ಯಗಾರ ಜರುಗಿತು.
ಹೆಲ್ತ್ ಟಿಪ್ಸ್ ಕುರಿತು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಷಣ್ಮುಖಪ್ಪ ಪೊಲೀಸ್ ಸಿಬ್ಬಂದಿಗಳಿಗೆ ಉಪನ್ಯಾಸ ನೀಡಿ ಹೆಚ್ಚು ತೂಕ ಇರುವ ಪೋಲಿಸ್ ಸಿಬ್ಬಂದಿಗಳು ಮಿತವಾದ ಆಹಾರ ಸೇವನೆ ಮಾಡುವ ಮೂಲಕ ಆಹಾರದ ಸಮತೋಲನ ಕಾಪಾಡಿಕೊಳ್ಳಬೇಕು, ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು, ಸಿರಿಧಾನ್ಯಗಳನ್ನು ಹೆಚ್ಚು ಉಪಯೋಗಿಸಬೇಕು, ಪ್ರತಿನಿತ್ಯ ಯೋಗ, ಧ್ಯಾನ, ವ್ಯಾಯಾಮ, ವಾಕಿಂಗ್ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ನಿವೃತ್ತ ಶಿಕ್ಷಕರ ಕಲಾ ತಂಡದಿಂದ ಆರೋಗ್ಯ ಬಗ್ಗೆ ಜಾಗೃತಿ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಐ ನಿಂಗಪ್ಪ, ರಾಜಪ್ಪ, ಮಲ್ಲಿಕಾರ್ಜುನನಾಯ್ಕ್, ಯೋಗ ಉಪನ್ಯಾಸಕ ಲೋಕೇಶ್, ರಾಮಮೂರ್ತಿ, ಈಶಪ್ಪ, ಸಲಾಂ, ಸೇರಿದಂತೆ ಇತರರು ಇದ್ದರು.
25ಎಚ್‍ಪಿಎಲ್1-ಪೋಟೋ-
ಹರಪನಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ತ್ ಕೇರ್ ಕುರಿತು ಕಾರ್ಯಗಾರ ನಡೆಯಿತು.