ಪದವಿ ಪ್ರದಾನ ಸಮಾರಂಭ
ಲಕ್ಷ್ಮೇಶ್ವರ,ಮೇ26 : ಪಟ್ಟಣದ ಸವಣೂರ ರಸ್ತೆಯಲ್ಲಿ ಇರುವ ಶ್ರೀಮತಿ ಕಮಲಾ ವೆಂಕಪ್ಪ ಎಮ್ ಅಗಡಿ ಇಂಜನಿಯರಿಂಗ ಕಾಲೇಜಿನ ಪದವಿ ಪ್ರಧಾನ ಸಮಾರಂಭ ಜರುಗಿತು.
ಮುಖ್ಯಅತಿಥಿಯಾಗಿ ಆಗಮಿಸಿ ದ್ದ ಬಾಗಲಕೋಟಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಪೆÇ್ರ ಆನಂದ ಎಸ್ ದೇಶಪಾಂಡೆ ಅವರು ಮಾತನಾಡಿ, ಇಂದಿನ ಆದುನಿಕ ಜಗತ್ತಿನಲ್ಲಿ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ವಿಪುಲವಾದ ಅವಕಾಶಗಳಿದ್ದು ವಿದ್ಯಾರ್ಥಿಗಳು ತಮ್ಮ ಶಕ್ತಿ ಸಾಮರ್ಥ್ಯ ಮತ್ತು ಕೌಶಲ್ಯಗಳ ಮುಖಾಂತರ ಸಾಧನೆ ಮೆಟ್ಟಿಲು ಏರಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ವಿದ್ಯಾರ್ಥಿಗಳು ಪದವಿ ನಂತರ ವೃತ್ತಿಗಾಗಿ ಜೀವನದಲ್ಲಿ ಉತ್ಸಾಹ ಲವಲವಿಕೆ ಮತ್ತು ಪ್ರೆರಣಾ ಶಕ್ತಿಯಾಗಿ ಶ್ರಮಿಸಬೇಕು ಜ್ಞಾನದ ಜೊತೆಗೆ ಕೌಶಲ್ಯ ಮಾನವೀಯತೆ ಗುಣಗಳನ್ನು ರೂಡಿಸಿಕೊಳ್ಳಬೇಕು ವಿದ್ಯಾರ್ಥಿ ದೆಸೆಯಲ್ಲಿ ಅಂಕಗಳಿಗಿಂತಲೂ ಬುನಾದಿಯನ್ನು ಗಟ್ಟಿಗೊಳಿಸಿ, ಮನನ ಶಕ್ತಿ ಸಾಮರ್ಥ್ಯ ಮನದಟ್ಟು ಮಾಡಿಕೊಂಡು ಆತ್ಮ ವಿಶ್ವಾಸದೊಂದಿಗೆ ಮುಂದುವರಿಯಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿ ಕಲಿಸಿದ ಗುರುಗಳನ್ನು ಕಲಿತ ಶಿಕ್ಷಣ ಸಂಸ್ಥೆಯನ್ನು ಎಂದಿಗೂ ಮರೆಯಬಾರದು ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರು ಅವಗಳನ್ನು ಮೆಟ್ಟಿ ನಿಂತು ಉಜ್ವಲ ಭವಿಷ್ಯವನ್ನು ಹೊಂದಬೇಕು ಎಂದರು.
ಮೇಘಾ ಶ್ರದ್ದಾ ನಿರೂಪಿಸಿದರು. ವೈಭವಿ ಪ್ರಾರ್ಥಿಸಿದರು. ಪ್ರತಿಮಾ ಮಹಾಪುರುಷ ಸ್ವಾಗತಿಸಿದರು. ಪದವಿ ಗಳಿಸಿಕೊಂಡು ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ ಪರಶುರಾಮ ಬಾರ್ಕಿ ವಹಿಸಿದ್ದರು.
ವೇದಿಕೆ ಮೇಲೆ ಡಾ. ಸುಭಾಸ ಮೇಟಿ, ಡಾ. ಗಿರೀಶ ಯತ್ತಿನಹಳ್ಳಿ, ಡಾ. ಎಸ್ ಪಿ ಮಹಾಪುರುಷ, ಪಿ ಯು ಸಿ ಕಾಲೇಜು ಪ್ರಾಚಾರ್ಯ
ಡಾ.ಎನ್ ಹಯವದನ, ವಿಕ್ರಮ ಶಿರೋಳ, ಡಾ.ಆರ್ ಎಮ್ ಪಾಟೀಲ್, ಡಾ. ಸಂತೋಷ ಭುಜರಿ, ಡಾ. ರಾಜಶೇಖರ ಕುಂಬೆ, ಡಾ.ದೇವೇಂದ್ರಕೆ, ಡಾ. ಸ್ವಪ್ನಾ ಚನ್ನಗೌಡ, ಡಾ. ರಾಜಶೇಖರ ಮೂಲಿಮನಿ, ಡಾ. ಸುಜಾತಾ ಸಂಗೂರ ಉಪಸ್ಥಿತರಿದ್ದರು.
ಪೆÇ್ರ ಪ್ರತಿಮಾ ಮಹಾಪುರುಷ, ಪೆÇ್ರ ಸೋಮಶೇಖರ ಕೇರಿಮನಿ, ಪೆÇ್ರ ಎಸ್ ಎಫ್ ಕೊಡ್ಲಿ, ಮೇಘಾ, ಶ್ರದ್ದಾ, ಮತ್ತು ವೈಭವಿ ಪಾಲ್ಗೊಂಡಿದ್ದರು.