ಬಿತ್ತನೆ ಬೀಜ ಸರಬರಾಜು
ಅಣ್ಣಿಗೇರಿ, ಮೇ26: ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜಗಳನ್ನು ಸರ್ಕಾರ ಈಗಾಗಲೇ ಆಯಾ ಕೇಂದ್ರಗಳಿಗೆ ಸರಬರಾಜು ಮಾಡಿದೆ. ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಸಾಕಷ್ಟು ಬಿತ್ತನೆ ಬೀಜಗಳನ್ನು ಸರಬರಾಜು ಮಾಡಿದೆ ರೈತರು ಆತಂಕ ಪಡದೇ ಜಿ ಬೀಜಗಳನ್ನು ಖರೀದಿಸಬೇಕು ಎಂದು ಕೃಷಿ ಅಧಿಕಾರಿ ಕೆ.ಎಸ್.ಪಾಟೀಲ ರೈತರಿಗೆ ಮನವಿ ಮಾಡಿದರು.
ಅವರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಆರಂಭಗೊಂಡ ಬೀಜ ವಿತರಣೆ ಮಾಡಿ ಮಾತನಾಡಿದರು. ಅಣ್ಣಿಗೇರಿ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಹೆಸರನ್ನು ಬೆಳೆಯುವದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೀಜವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರು ಬೀಜಗಳನ್ನು ಪಡೆಯಲು ತಮ್ಮ ಎಫ್‍ಐಡಿಯನ್ನು ತಪ್ಪದೇ ತರಬೇಕು. ಇಲ್ಲವಾದಲ್ಲಿ ಆಧಾರ ಕಾರ್ಡ, ಬ್ಯಾಂಕ್ ಪಾಸ್‍ಬುಕ್ ಮತ್ತು ಜಮೀನಿನ ಖಾತೆ ಉತಾರವನ್ನು ತಂದು ನಮ್ಮ ಕಚೇರಿಯಲ್ಲಿ ಎಫ್‍ಐಡಿ ಮಾಡಿಸಿ ಬೀಜವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿನೋದ್ ಬರಮಗೌಡರ ನಿಂಗಪ್ಪ ಬಡ್ಡೇಪನವರ, ದಾವಲ್ ಸಾಬ್ ದರವಾನ ಕೃಷಿ ಅಧಿಕಾರಿ ಕೆ.ಎಸ್.ಪಾಟೀಲ ಉಪಸ್ಥಿತರಿದ್ದರು.