ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕರೆ
ಕೋಲಾರ,ಮೇ.೨೬- ಕಾರ್ಯಕರ್ತರು ಸಕ್ರಿಯವಾಗಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡಬೇಕು.ತಾಲೂಕುವಾರು ಬಿಜೆಪಿ ಜೆಡಿಎಸ್ ಪ್ರಮುಖರ ಪಟ್ಟಿಯನ್ನು ಮಾಡಿಕೊಂಡು ನಾಳೆಯಿಂದಲೇ ಚುನಾವಣಾ ಪ್ರಚಾರವನ್ನು ಮಾಡಬೇಕು.ಮತದಾರ ಶಿಕ್ಷಕರನ್ನು ಭೇಟಿ ಮಾಡಿ ಡಾ.ವೈಎ.ನಾರಾಯಣಸ್ವಾಮಿರವರಿಗೆ ಪ್ರಥಮ ಪ್ರಶಸ್ತಿ ಮತವನ್ನು ನೀಡುವಂತೆ ಮನವರಿಕೆ ಮಾಡಬೇಕೆಂದು ಮುಖಂಡರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಕರೆ ನೀಡಿದರು.
ನಗರ ಹೊರವಲಯದ ಜೆ.ಡಿ.ಎಸ್. ಮುಖಂಡ ಸಿ.ಎಂ,ಆರ್, ಶ್ರೀನಾಥ್ ಅವರು ಗೃಹ ಕಚೇರಿಯ ಅವರಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಎನ್.ಡಿ.ಎ ಅಭ್ಯರ್ಥಿಯ ಸಮನ್ವಯ ಬೈಠಕ್ ಸಭೆಯನ್ನು ಜೆಡಿಎಸ್ ಮುಖಂಡ ಶ್ರೀನಾಥ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿರವರ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮೇ೨೭ ಶಿಕ್ಷಕರ ಸಮಾವೇಶಕ್ಕೆ ಕುಮಾರಸ್ವಾಮಿ –
ಜೆ.ಡಿ.ಎಸ್.ಪಕ್ಷದ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಮಾತನಾಡಿ ಪ್ರತಿಯೊಬ್ಬ ಕಾರ್ಯಕರ್ತರು ಶಿಕ್ಷಕರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕೆಂದು ಮನವಿ ಮಾಡಿದ ಅವರು ಇದೇ ೨೭ ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಗರ ಹೊರವಲಯದ ಶ್ರೀ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಮತದಾರ ಶಿಕ್ಷಕರ ಈ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರವರು ಹಾಗೂ ಎನ್.ಡಿ.ಎ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ, ಸಂಸದ ಎಸ್.ಮುನಿಸ್ವಾಮಿ, ಹಾಲಿ ಶಾಸಕರುಗಳು, ಮಾಜಿ ಶಾಸಕರುಗಳು, ರಾಜ್ಯ ಮುಖಂಡರು, ಜಿಲ್ಲಾ ಮುಖಂಡರುಗಳು, ಶಿಕ್ಷಕ ಮತದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಎಲ್ಲಾ ಮುಖಂಡರು ಶಿಕ್ಷಕ ಮತದಾರರನ್ನು ಈ ಕಾರ್ಯಕ್ರಮಕ್ಕೆ ಕರೆ ತರಬೇಕು ಹಾಗೂ ಶಿಕ್ಷಕರ ಕ್ಷೇತ್ರವನ್ನು ಮತ್ತೆ ನಾವೇ ಗೆಲ್ಲುವಂತ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಂಡರು.
ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ಲೋಕಸಭೆಯ ಅಭ್ಯರ್ಥಿ ಮಲ್ಲೇಶ್ ಬಾಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಓಂ ಶಕ್ತಿ ಚಲಪತಿ, ಮಹೇಶ್, ಹರಿಬಾಬು, ಜೆಡಿಎಸ್ ಮುಖಂಡರಾದ ನಟರಾಜ್, ಬಾಬು ಮೌನಿ, ಟಿಎಪಿಎಂಸಿ ಅಧ್ಯಕ್ಷ ವಡಗೂರು ರಾಮು, ಮಹಿಳಾ ಅಧ್ಯಕ್ಷೆ ಅರುಣಮ್ಮ, ಮುಖಂಡರಾದ ಮಮತಮ್ಮ, ಮಾಧ್ಯಮ ಪ್ರಮುಖರಾದ ಪ್ರವೀಣ್ ಗೌಡ ಹಾಗೂ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಸೇರಿದಂತೆ ಎರಡು ಪಕ್ಷಗಳ ತಾಲೂಕು ಅಧ್ಯಕ್ಷರು. ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮುಖಂಡರುಗಳು ಎಲ್ಲಾ ಪ್ರಮುಖ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.