ಖಾಜಾ ಬಂದಾ ನವಾಜ್ ಉರುಸ್: ಗಂಧದ ಮೆರವಣಿಗೆ
ಕಲಬುರಗಿ:ಮೇ.25: ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದಾ ನವಾಜ್ ಅವರ 620ನೇ ಉರುಸ್ ನಿಮಿತ್ತ ಶುಕ್ರವಾರ ನಗರದ ಹೃದಯ ಭಾಗದಲ್ಲಿರುವ ಮೆಹಬೂಬ್ ಗುಲ್ಶನ್ ಉದ್ಯಾನವನದಲ್ಲಿ ದರ್ಗಾದ ಪೀಠಾಧಿಪತಿ ಸಜ್ಜಾದೇ ನಶೀನ್ ಡಾ. ಸಯ್ಯದ್ ಶಾಹ ಖುಸ್ರೋ ಹುಸ್ಸೇನಿ ಅವರು ಗಂಧದ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಿದರು.
ಗಂಧದ ಮೆರವಣಿಗೆ ಮೆಹಬೂಬ್ ಗುಲ್ಶನ್ ಉದ್ಯಾನವನದಿಂದ ಜಗತ್ ಸರ್ಕಲ್‍ಗೆ, ಸೂಪರ್ ಮಾರ್ಕೆಟ, ಚೌಕ್ ಸರ್ಕಲ್‍ನಿಂದ ಗಣೇಶ್ ಮಂದಿರ, ಬಹಮನಿ ಚೌಕ್ ಮತ್ತು ಹಫ್ತ್ ಗುಂಬಜ್ ಮಾರ್ಗವಾಗಿ ದರ್ಗಾ ಶರೀಫ್‍ಗೆ ತಲುಪಿತು.
ಇದಕ್ಕೂ ಮುನ್ನ ಶುಕ್ರವಾರ ನಮಾಜ್ ನಂತರ ಗಂಧದ ಮೆರವಣಿಯ ಸಂಪ್ರದಾಯ ಆರಂಭಗೊಂಡಿತು. ಜಾಲಾಲಿ ಫಕೀರಗಳ ಕರ್ಬ್‍ಗಳ ಮತ್ತು ನಾಥ್‍ಗಳ ಮೂಲಕ ಮೆರವಣಿಗೆ ಗಮನಸೆಳೆಯಿತು.
ರಾತ್ರಿ 10.30ಕ್ಕೆ ದರ್ಗಾದ ಗ್ಯಾರಾ ಸಿಡಿಯಲ್ಲಿ ಗಂಧ ತಲುಪಿದ ಸಮಯದಲ್ಲಿ ಜನಾಬ್ ಸೈಯದ್ ಮುಹಮ್ಮದ್ಲಿ ಅಲ್ ಹುಸೇನಿ, ಜನಾಬ್ ಡಾ ಸೈಯದ್ ಮುಸ್ತಫಾ ಅಲ್ ಹುಸೇನಿ, ಜನಾಬ್ ಸೈಯದ್ ಷಾ ಹಸನ್ ಶಬ್ಬೀರ್ ಹುಸೇನಿ ಸಾಹೇಬ್ ಸಜ್ಜಾದ್ ನಹಿಂ ರೌಜಾ ಖುರ್ದ್, ಜನಾಬ್ ಸೈಯದ್ ಶಾ ತಕಿವುಲ್ಲಾ ಹುಸೇನಿ, ಜನಾಬ್ ಮೀರ್ ಸದರುದ್ದೀನ್ ಅಲಿ ಖಾನ್, ಜನಾಬ್ ಮೀರ್ ಸದರುದ್ದೀನ್ ಅಲಿ ಖಾನ್ ಶರೀಫ್ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.