ಎದುರಾಳಿಗಳು ಏನುಮಾಡುತ್ತಾರೆಂದು ನಾವು ನೋಡಲ್ಲ ನಮಗೆ ಗೆಲುವೇ ಮುಖ್ಯ: ನಾಗೇಂದ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಚುನಾವಣೆಯಲ್ಲಿ ಎದುರಾಳಿಗಳು ಏನುಮಾಡುತ್ತಾರೆಂದು ನಾವು ನೋಡಲ್ಲ. ನಮ್ಮ ಕಾರ್ಯಕರ್ತರ ಶಕ್ತಿಯಿಂದ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಸಹ ಗೆಲುವು ಖಚಿತ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಕಳೆದ ಆರು ತಿಂಗಳ ಹಿಂದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು ಅವರು ಮತದಾರರನ್ನು ಮುಟ್ಟುವ ಕಾರ್ಯ ಮಾಡಿದ್ದಾರೆ. ಈ ಭಾಗಕ್ಕೆ ಬರಯವುದಷ್ಟೇ ಲೇಟ್ ಆಗಿದೆ. ನಾವೆಲ್ಲ ಮುಖಂಡರು ಕಾರ್ಯಕರ್ತರು ಇದ್ದು ಈ ಕ್ಷೇತ್ರದ
42 ವಿಧಾನಸಭಾ ಕ್ಷೇತ್ರಗಳಲ್ಲಿ 27 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾವೆ. ಅವರೆಲ್ಲ ಒಂದು ಶಕ್ತಿಯಾಗಿ ಇದೆ. ಕಲ್ಯಾಣ ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಜಯ ಭಾರಿಸಲಿದೆಂಬ ವಿಶ್ವಾಸ ನಮ್ಮದಾಗಿದೆಂದರು.
ನಿರ್ಲಕ್ಷ ಇಲ್ಲ:
ಈ ಭಾಗದವರಿಗೆ ಟಿಕೆಟ್ ನೀಡದೇ ನಿರ್ಲಕ್ಷ ಮಾಡಿದೆ ಎಂಬ ಪ್ರಶ್ನೆಗೆ. ಹಾಗೇನಿಲ್ಲ ಈಗ ನಡೆಯಲಿರುವ 11 ವಿಧಾನ ಪರಿಷತ್ ಸ್ಥಾನಗಳ
ನಾಮಿನೇಟ್ನಲ್ಲಿ ಬಳ್ಳಾರಿಗೆ ಒಂದು ಸ್ಥಾನ ಕೇಳುತ್ತಿದೆ. ರಾಜ್ಯಸಭೆಗೆ ಎರಡನೇ ಬಾರಿಗೆ ಆಧ್ಯತೆ ನೀಡಿದೆ. ಬಳ್ಳಾರಿಯನ್ನು ನಿರ್ಲಕ್ಷ ಮಾಡಿಲ್ಲ ಎಂದು ಸಚಿವ ನಾಗೇಂದ್ರ ಸಮರ್ಥಿಸಿಕೊಂಡರು.
ವಿಧಾನ‌ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು ಮಾತನಾಡಿ, ನಾನು ಎಂಎಲ್ ಸಿ ಆಗಿದ್ದಾಗ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿದೆ. 371 ಜೆ. ಜಾರಿಗೆ ಬಂದ ಮೇಲೆ ಶಿಕ್ಷಕರ ನೇಮಕಾತಿ ಮತ್ತು ವೇತನ ಹೆಚ್ಚಳಕ್ಕೆ ಹೋರಾಟ ಮಾಡಿದ ಕೀರ್ತಿ ನಮ್ಮದು.
ಸದನದಲ್ಲಿ ಬಿಜೆಒಇ ಜೆಡಿಎಸ್ ಸದಸ್ಯರಿದ್ದರೂ ಹೋರಾಟ ನಮ್ಮ‌ಪಕ್ಷದ್ದು. ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನ ಈ ಭಾಗಕ್ಕೆ ನೀಡಿರುವೆ ಎಂದರು.
ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ಕ್ಷೇತ್ರದಲ್ಲಿ 41 ತಾಲೂಕು 600 ಕ್ಕೂ ಹೆಚ್ಚು ಹಳ್ಳಿಗಳಿವೆ. ಈ ಭಾಗಕ್ಕೆ ಬಂದಿಲ್ಲ ಎಂಬ ಆರೋಪ ಮಾಡುತ್ತಿದೆ. ಬಂದು ಹೋಗಿರುವೆ ಆದರೂ ಹೆಚ್ಚು ಬಂದಿಲ್ಲ. ಎರೆಡು ವರ್ಷ ಕರೋನಾ ಬಾದೆ ಆಯ್ತು. ಮಾಧ್ಯಮಗಳ ಮುಂದೆ ಬಂದಿಲ್ಲ ಎಂದ ಅವರು, ಎನ್ ಪಿಎಸ್ ರದ್ದಿಗೆ ಹೋರಾಟ ಮಾಡುತ್ತಿದೆಎಂದರು. ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಮುಂದುವರೆದಿದೆಂದ ಅವರು ತಮಗೆ
ವರ್ಷಕ್ಕೆ ಎರೆಡು ಕೋಟಿ ಮಾತ್ರ ಅನುದಾನ ದೊರೆಯುತ್ತೆ. ಅದರಲ್ಲಿ ನೂರು ಶಾಲೆಗೆ ಶುದ್ದ ಕುಡಿಯುವ ನೀರಿನ ಯಂತ್ರಗಳನ್ನು ಕೊಡಿಸಿದೆಂದು ಹೇಳಿದರು. ನಿಮ್ಮ ಶಾಲೆಗೆ ಅನುದಾನಪಡೆದಿದೆಂಬ ಆರೋಪ ಮಾಡಿದೆಂಬ ಪ್ರಶ್ನೆಗೆ ಅದು ಸುಳ್ಳು ಆರೋಪ, ಹಾಗೆ ಬಳಕೆ ಮಾಡಲು ಬರುವುದಿಲ್ಲವೆಂದರು.
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಶಾಸಕ ಈ.ತುಕರಾಂ, ಲಿಡ್ಜರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಎಪಿಎಂಸಿ ಅಧಗಯಕ್ಷ ಕಟ್ಟೆಮನೆ ನಾಗರಾಜ್, ಮೇಯರ್ ಶ್ವೇತ ಸೋಮಶೇಖರ, ಮಾಜಿ ಎಂಎಲ್ ಸಿ. ಕೆಎಸ್.ಎಲ್.ಸ್ವಾಮಿ. ನಗರ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರುಗಳಾದ ಎ.ಮಾನಯ್ಯ, ರಾಂಪ್ರಸಾದ್, ನಾಗರಾಜ್, ಮಂಜುಳ, ಬಿ.ವಿ.ಶಿವಯೋಗಿ, ಕಲ್ಕಂಬ ಪಂಪಾಪತಿ ಮೊದಲಾದವರು ಇದ್ದರು.