ಜಮೀನಿನ ದಾರಿಗಾಗಿ ಆಗ್ರಹಿಸಿ ಧರಣಿ ಸತ್ಯಾಗ್ರಹ
ತಾಳಿಕೋಟೆ:ಮೇ.25: ಜಮೀನಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಿಸಿ ದಿನಾಂಕ : 27/05/2024 ರಂದು ಸೋಮವಾರ ತಾಳಿಕೋಟೆ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತರಾದ ಸಾಹೇಬಗೌಡ ಬಿರಾದಾರ ಅವರು ತಿಳಿಸಿದ್ದಾರೆ.
ತಾಳಿಕೋಟೆ ತಾಲೂಕಿನ ಗೊಟಗುಣಕಿ ಗ್ರಾಮದ ರೈತರಾದ ಸಾಹೇಬಗೌಡ ಬಿರಾದಾರ ಸೇರಿದಂತೆ ಹಲವಾರು ರೈತರ ಜಮೀನುಗಳಿಗೆ ಹೋಗಲು ದಾರಿ ಸಮಸ್ಯ ವಿದ್ದು ದಾರಿ ಮಾಡಿಕೊಡಬೇಕೆಂದು ಸರಕಾರದ ಸುತ್ತೋಲೆ ಇದ್ದರೂ ಹಾಗೂ ನ್ಯಾಯಾಲಯದ ಆದೇಶ ಇದ್ದರು ಕೂಡಾ ತಹಶೀಲ್ದಾರರು ದಾರಿ ಮಾಡಿಕೊಡುತ್ತಿಲ್ಲ ಆದ್ದರಿಂದ ಸೋಮವಾರದಂದು ರೈತರೊಂದಿಗೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಬೆಂಬಲ ನೀಡಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಅಂದು ಬೆಳಿಗ್ಗೆ 11 :00 ಘಂಟೆಗೆ ನೇರವಾಗಿ ತಹಶೀಲ್ದಾರ ಕಛೇರಿಗೆ ಆಗಮಿಸಿ ಕಚೇರಿಯ ಮುಂಬಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತರಾದ ಸಾಹೇಬಗೌಡ ಬಿರಾದಾರ ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.