ತೋಳ ದಾಳಿಗೆ ಕರು ಬಲಿ
ಆಳಂದ:ಮೇ.25: ತೋಳ ದಾಳಿಯಿಂದಾಗಿ ತಾಲೂಕಿನ ಮಾದನಹಿಪ್ಪರಗಾ ವಲಯದ ದರ್ಗಾಶಿರೂರ ಗ್ರಾಮದ ರೈತನ ಹೊಲದಲ್ಲಿದ್ದ ಹಸುವಿನ ಕರು ಬಲಿಯಾದ ಘಟನೆ ಗುರುವಾರ ನಡೆದಿದೆ.
ಗ್ರಾಮದ ಕಾಶಿನಾಥ ಯಶ್ವಂತರಾಯ ಹಳಿಗೋಡೆ ಎಂಬುವರ ಹಸುವಿನ ಕರುವಿನ ಮೇಲೆ ಹಠಾತ ದಾಳಿ ನಡೆಸಿದ ತೋಳವು ಕರುವಿನ ಶರೀರದ ಮಧ್ಯ ಭಾಗದಿಂದ ಎರಡು ಭಾಗ ತುಂಡಸಿ ತಿಂದುಹಾಕಿ ಕಾಲ್ಕಿತ್ತಿದೆ. ಈ ರೈತನ ಹೊಲದಲ್ಲಿ ತೋಳ ಓಡಾಡಿದ ಕುರಿತು ಸೇರೆಹಿಡಿದ ವಿಡಿಯೂ ವಾಟ್ಸ್ ಆ್ಯಪ್ ಗುಂಪುಗಳಿಗೆ ಮುಖಂಡ ಮಹಾಂತೇಶ ಸಣ್ಣಮನಿ ಅವರು ಹಂಚಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ಪಶು ವೈದ್ಯ ಮಹಾಂತಪ್ಪ ಕಂಬಾರ ಅವರು ಭೇಟಿ ನೀಡಿ ಪರಿಶೀಲಿಸಿದರು.