ಲೋಕ ಕಲ್ಯಾಣಕ್ಕಾಗಿ ಮಹಾಶಿವಯೋಗ ಅನುಷ್ಟಾನ
ವಿಜಯಪುರ:ಮೇ.25:ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದ ಧರ್ಮದರ್ಶಿಗಳಾದ ಪರಮಪೂಜ್ಯ ಶ್ರೀ ಲಕ್ಷ್ಮಣ ಶಿವಶರಣರು ವಿಶ್ವಶಾಂತಿಗಾಗಿ ಮಹಾಶಿವಯೋಗ ಅನುಷ್ಟಾನವನ್ನು ಪ್ರಾರಂಭಿಸಿದ್ದಾರೆ.
ವಿಶ್ವದಲ್ಲಿ ಉತ್ತಮವಾದ ಮಳೆಯಾಗಿ ಬೆಳೆ ಬಂದು ಸರ್ವರೂ ಶಾಂತಿ, ನೆಮ್ಮದಿಯ ಜೀವನವನ್ನು ಸಾಗಿಸಬೇಕು. ಹಾಗೂ ಸಕಲ ಜೀವರಾಶಿಗಳಿಗೆ ಒಳಿತಾಗಬೇಕೆಂದು ಜಗದೊಡೆಯನಾದ ಶ್ರೀಗಿರಿಯ ಶ್ರೀ ಮಲ್ಲಿಕಾರ್ಜುನನಿಗೆ ಸಹಸ್ರ ನಾಮಾವಳಿಯ ಮಹಾಶಿವಪೂಜೆಯನ್ನು ಸಲ್ಲಿಸಿ ಪ್ರತಿನಿತ್ಯ ಕಾಯಕದೊಂದಿಗೆ 50 ಸಾವಿರ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞೆ 12 ಗಂಟೆ ಮೌನ ಶಿವಯೋಗ ಹಾಗೂ ಗಂಟೆಗೊಮ್ಮೆ ಇಷ್ಟಲಿಂಗ ಪೂಜೆಯನ್ನು ನೆರವೇರಿಸುವ ಶುಭಸಂಕಲ್ಪವನ್ನು ಮಾಡಿ ಸಂಪೂರ್ಣ ಒಂದು ವರ್ಷದ ಕಾಲ ಮಹಾಶಿವಯೋಗ ವೃತವನ್ನು ಪ್ರಾರಂಭಿಸಿದ್ದಾರೆ ಎಂದು ಹಣಮಂತ ಪುಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.