ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಮನವಿ
ತಾಳಿಕೋಟೆ:ಮೇ.25: ತಾಲೂಕಿನ ಸಮಸ್ತ ರೈತರ ಅನೇಕ ಸಮಸ್ಯೆಗಳು ಈ ಕೆಳಗಿನಂತಿವೆ ಕೂಡಲೇ ಎಲ್ಲಾ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸಬೇಕು ಮತ್ತು ತಾಲೂಕಿನ ಎಲ್ಲಾ ಅಧಿಕಾರಿಗಳೊಡನೆ ರೈತ ಮುಖರೊಂಡನೆ ಸಭೆ ಕರೆದು ಶಾಶ್ವತ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಪದಾಧಿಕಾರಿಗಳು ಶುಕ್ರವಾರರಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತಾಪಿ ಜನರಿಗೆ ಸಂಪೂರ್ಣ ನಷ್ಟಗೊಂಡಿರುವ ಹಿನ್ನಲೆಯಲ್ಲಿ ವಿಫತ್ತು ನಿರ್ವಹಣಾ ಕಾನೂನಿನಡಿ ಪ್ರತಿ ಹೆಕ್ಟರಗೆ 8500 ರಾಜ್ಯ ಮತ್ತು 8500 ಕೇಂದ್ರದ ಪರಿಹಾರ ಗರಿಷ್ಟ 2 ಹೆಕ್ಟರೆಗೆ ಪರಿಹಾರ ಹಾಕಬೇಕು, ಆದರೆ ಕೇಂದ್ರ ಸರಕಾರ ನೀಡಿದ ಪರಿಹಾರದಲ್ಲಿಯೇ 2000 ಕಡಿತ ಮಾಡಿರುವುದು ಖಂಡನೀಯ, ಅದನ್ನು ಕೂಡಲೇ ರಾಜ್ಯ ಸರಕಾರ 2000+8500 ಸೇರಿಸಿ ಒಟ್ಟಾರೆ 10500 ರೈತರ ಪ್ರತಿ ಹೆಕ್ಟರಗೆ ಹಾಕಬೇಕು ಈ ಕುರಿತು ರೈತಾಪಿ ಜನರ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ಮನವಿ ಮಾಡಬೇಕು, ಬರಗಾಲ ಪರಿಹಾರ ಸಮೀಕ್ಷೆ ಸರಿಯಾಗಿ ಮಾಡದೇ, ಬೇಜಬ್ದಾರಿಯಿಂದ ಹೊರಗುತ್ತಿಗೆ ಮೂಲಕ ಮನಸ್ಸಿಗೆ ಬಂದ ಹಾಗೆ ಸರ್ವೇ ಮಾಡಿ ಕೈತೊಳೆದುಕೊಂಡಿದ್ದಾರೆ, ಆದರೆ ನಿಜವಾಗಿ ತಾಲೂಕಿನ ಎಲ್ಲಾ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಬೇಕು, ಅದನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಆಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರೆಸಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು, ಮುಂಗಾರು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿರುವುದರಿಂದ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳನ್ನು ಅವಶ್ಯಕತೆಗೆ ಅನುಗುಣವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು, ಕಳಪೆ ಬೀಜ ಮಾರಾಟ ಮಾಡುವ ಅಂಗಡಿಕಾರರ ವಿರೂದ್ದ ಕಠಿಣ ಕ್ರಮ ಜರುಗಿಸಬೇಕು ಅವರ ಏಜೇನ್ಸಿಯನ್ನು ಸಂಪೂರ್ಣ ಅಮಾನ್ಯ ಮಾಡಬೇಕು, ಮುಂಗಾರು ಪ್ರಾರಂಭವಾಗುವ ಅಡಿಯಲ್ಲಿ ಎಲ್ಲಾ ರೈತರು ಜಮೀನುಗಳಿಗೆ ಹೋಗುವ ಮಾರ್ಗದಲ್ಲಿ ದಾರಿ ಹದಗೆಟ್ಟು, ಕಂಠಿ ಬೆಳೆದು ಸಾಕಷ್ಟು ಅನಾನುಕೂಲವಾಗುತ್ತಿವೆ, ಅವುಗಳನ್ನು ಕೂಡಾ ಸರಿಪಡಿಸಿ ಸ್ವಚ್ಛಗೊಳಿಸಬೇಕು, ಹಿಂದಿನ ಸರಕಾರ ವಿದ್ಯುತ್ ಇಲಾಖೆಯಡಿ ರೈತರ ಪಂಪಸೆಟಗಳಿಗೆ 25000 ಕೊಡುತ್ತಿತ್ತು, ಈಗ ನಿಲ್ಲಿಸಿದ್ದು ಈಗ ಸುಮಾರು 2 ಲಕ್ಷ ಹಣ ಕಟ್ಟುವಂತೆ ಹೇಳುತ್ತಿದ್ದಾರೆ. ಇದು ರೈತರು ಮತ್ತು ಕೃಷಿಯನ್ನು ದೀವಾಳಿ ಎಬ್ಬಿಸುವ ಯೋಜನೆ ಆಗಿದೆ ಅದು ಕೂಡಾ ನಿಲ್ಲಬೇಕು, ತಾಲೂಕಿನಾಧ್ಯಾಂತ ಅನೇಕ ತೋಟದ ವಸ್ತಿಯಿದ್ದು, ಅಲ್ಲಿ ರಾತ್ರಿ ಸಿಂಗಲ್ ಫೆಸ್ ವಿದ್ಯುತ್ ಕೊಡಬೇಕೆನ್ನುವುದು ಎಲ್ಲರ ಬೇಡಿಕೆಯಾಗಿದೆ. ರಾತ್ರಿ ಹೊತ್ತು ರೈತರ ಮಕ್ಕಳಿಗೆ ಅಭ್ಯಾಸ ಮಾಡಲು, ಮತ್ತು ರೈತರು ಧನಕರುಗಳಿಗೆ ಮೇವು ಹಾಕಲು ಹೋದಾಗ ಹುಳಹುಪ್ಪಡಿಗಳು ಕಡಿದು ಸಾವುಗಳು ಸಂಭವಿಸಿರುವುದು ಇದೆ, ಕಾರಣ ರಾತ್ರಿ ಸಿಂಗಲ್ ಫೇಸ್ ನೀಡಬೇಕು, ಫಸಲ್ ಭೀಮಾ ಯೋಜನೆಯಡಿ ಸಾಕಷ್ಟು ಮೊಸ ಆಗುತ್ತಿದ್ದು, ಅದನ್ನು ಕೂಡಲೇ ಪರಿಶಿಲಿಸಿ ನಷ್ಟಗೊಂಡ ರೈತರಿಗೆ ಕೆಲವೊಬ್ಬರಿಗೆ ವಿಮೆ ಬಂದಿರುತ್ತದೆ, ಬಹಳ ರೈತರಿಗೆ ಪರಿಹಾರ ಬಂದಿರುವುದಿಲ್ಲ, ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ಒದಗಿಸುವಂತಹ ಕಾರ್ಯ ಮಾಡಬೇಕು ಈ ಕುರಿತು 15 ದಿನಗಳೊಳಗಾಗಿ ಸಮರ್ಪಕವಾದ ಸೂಕ್ತ ಕ್ರಮದ ಉತ್ತರ ಬಾರದಿದ್ದರೆ ತಹಶಿಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಪತ್ರವನ್ನು ರೈತ ಸಂಘದ ಪದಾಧಿಕಾರಿಗಳು ತಹಶಿಲ್ದಾರ ಕಚೇರಿ ಸಿಬ್ಬಂದಿ ಬಾಬಾನಗರ ಅವರಿಗೆ ಸಲ್ಲಿಸಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಹಣಮಂತ ವಡ್ಡರ, ಕಲಕೇರಿ ಹೋಬಳಿ ಅಧ್ಯಕ್ಷ ಮಹಿಬೂಬಬಾಷಾ ಮನಗೂಳಿ, ಖಾಜಾಹುಸೇನ ಚೌದ್ರಿ, ಗೌಡಪ್ಪಗೌಡ ಹಳಿಮನಿ, ಮೈಹಿಬೂಬ ಗೊಬರಡಗಿ, ವೆಂಕಣ್ಣ ಗುತ್ಯಾಳ, ರಫೀಕ್ ಮುಲ್ಲಾ, ಮೊದಲಾದವರು ಇದ್ದರು.