ಅಕ್ಕ ಅನ್ನಪೂರ್ಣ ತಾಯಿ ನಿಧನಕ್ಕೆ ಸಿದ್ದಾರ್ಥ ಮಿತ್ರಾ ಸಂತಾಪ
ಹುಮನಾಬಾದ್ :ಮೇ.25:ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ ಅಕ್ಕ ಅನ್ನಪೂರ್ಣ ತಾಯಿ ಅವರ ನಿಧನಕ್ಕೆ ಯುವ ಲೇಖಕ ಹಾಗೂ ಸಾಮಾಜಿಕ ಚಿಂತಕ ಮತ್ತು ಧರಿನಾಡು ಕನ್ನಡ ಸಂಗದ ಹುಮನಾಬಾದ್ ತಾಲೂಕ ಘಟಕದ ಅಧ್ಯಕ್ಷ ಸಿದ್ಧಾರ್ಥ ಟಿ ಮಿತ್ರಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತನ್ನ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಸದಾಕಾಲ ಸಮಾಜದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಲಿಂಗಾಯತ ಮಹಾಮಠದ ಪೀಠಾಧ್ಯಕ್ಷ ಅಕ್ಕ ಅನ್ನಪೂರ್ಣ ಅವರು ತಮ್ಮ ಜೀವಿತ ಅವಧಿಯಲ್ಲಿ ಮಾಡಿದ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಸೇವೆಗಳು ಅವಿಸ್ಮರಣೀಯ. ಪ್ರಖರ ವೆ?ಚಾರಿಕತೆಯ ಪ್ರತಿರೂಪವಾಗಿದ್ದ ಅವರು ಗೊಡ್ಡು ಸಂಪ್ರದಾಯ, ಮೂಢನಂಬಿಕೆ, ಕಂದಚಾರಗಳನ್ನು ಧಿಕ್ಕರಿಸಿದವರು. ಬಸವಾದಿ ಶರಣರ, ವಚನಕಾರರ ನಿಜ ತತ್ವಗಳ ಅಡಿಯಲ್ಲಿ ತಮ್ಮ ಜೀವನ ಸಾಗಿಸಿದವರು. ಅಕ್ಕನವರು ಯಾವ ಆಡಂಬರ ಬಯಸದ ನಿರಾಡಂಬರ ನಿರಂಜನ ಸ್ವರೂಪಿ.ಅವರು ಲಿಂಗೆ?ಕ್ಯರಾದದ್ದು ಬಸವಣ್ಣನ ಅನುಯಾಯಿಗಳಿಗೆ ನಾಡಿಗೆ ತುಂಬಲಾರದ ಹಾನಿಯಾಗಿದೆ ಹಾಗೂ ಬಸವಾದಿ ಶರಣರು,ಅವರ ಆತ್ಮಕ್ಕೆ ಶಾಂತಿ ಸದ್ಗತಿ ಕರುಣಿಸಲಿ ಎಂದಿದ್ದಾರೆ.