ಅಧಿಕೃತ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಲು ಮನವಿ
ಭಾಲ್ಕಿ:ಮೇ.25: ಪಾಲಕರು ತಮ್ಮ ಮಕ್ಕಳಿಗೆ ಅಧಿಕೃತವಾಗಿ ಮಾನ್ಯತೆ ಪಡೆದ ಶಾಲೆಗಳಲ್ಲಿಯೇ ದಾಖಲಾತಿ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಯಗಳು ಕಡ್ಡಾಯವಾಗಿ ನೋದಣಿ ಮತ್ತು ಮಾನ್ಯತೆ ಪಡೆದು ಸಾಲೆಗಳನ್ನು ನಡೆಸಬೇಕಾಗಿರುತ್ತದೆ. ಅದರಂತೆ ಇಲಾಖೆಯು ಪ್ರತಿವರ್ಷ ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಿ ನಿಯಮಾನುಸಾರ ಪರಿಶೀಲಿಸಿ ಮಾನದಂಡಗಳನ್ನು ಪೂರೈಸಿದ ಅರ್ಹ ಶಾಲೆಗಳಿಗೆ ಅನುಮಿತಿಯನ್ನು ನೀಡಿರುತ್ತೇವೆ. ಅದರಂತೆ ತಾಲೂಕಿನ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೊಂದಣಿ ಮತ್ತು ಮಾನ್ಯತೆ ಪಡೆದ ಖಾಸಗಿ ಶಾಲೆಗಳ ವಿವರಗಳನ್ನು ಆಯುಕ್ತರ ಆದೇಶದ ಮೇರೆಗೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಸಿಲಾಗಿದೆ. ಅಲ್ಲದೇ ಸ್ಯಾಟ್ಸ್ ತಂತ್ರಾಂಶದಲ್ಲಿಯೂ ಅಳವಡಿಸಲಾಗಿದೆ. ಸಾರ್ವಜನಿಕರು ಇದರ ಲಾಭ ಪಡೆದು ತಮ್ಮ ಮಕ್ಕಳಿಗೆ ಅಧಿಕೃತ ಶಾಲೆಗಳಲ್ಲಿಯೇ ದಾಖಲಾತಿ ಮಾಡಬೇಕು ಎಂದು ಕೋರಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನಾ ಫಲಕದಲ್ಲಿ ಅಧಿಕೃತ ಶಾಲೆಗಳ ಡೈಸ್ ಕೋಡ್, ಶಾಲಾ ವಿಳಾಸ, ನೊಂದಣಿ ಪಡೆದ ವರ್ಷ, ಮಾಧ್ಯಮ, ಮಾನ್ಯತೆ ನವೀಕರಿಸಿದ ಅವಧಿ ಇತ್ಯಾಗಳನ್ನು ಕೂಲಂಕುಶವಾಗಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.