ಡಾ.ಸಿ.ಎಸ್ ದ್ವಾರಕನಾಥ್ ರನ್ನು ಪರಿಷತ್ ಸದಸ್ಯರಾಗಿ ನೇಮಿಸಲು ಒತ್ತಾಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೫;  ವಿಧಾನ ಪರಿಷತ್ ಗೆ ಡಾ ಸಿ.ಎಸ್.ದ್ವಾರಕನಾಥರವರನ್ನು ನಾಮನಿರ್ದೇಶನ ಮಾಡಬೇಕೆಂದು ನ್ಯಾಯಸಮಿತಿ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿಯಾದ ಎಸ್.ಪರಮೇಶ್  ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಒಟ್ಟು 11 ಮೇಲ್ಮನೆ ಸದಸ್ಯರು ನಿವೃತ್ತರಾಗಲಿದ್ದಾರೆ ವಿಧಾನ ಸಭೆ ಸಂಖ್ಯಾ ಬಲ ಆಧರಿಸಿ ಆಡಳಿತ ರೂಢ ನಮ್ಮ ಕಾಂಗ್ರೇಸ್ ಪಕ್ಷಕ್ಕೆ 7-8 ಸ್ಥಾನಗಳು ಸಿಗಲಿದೆ.ಸಮಾಜದ ಕಟ್ಟಕಡೆಯ ಸಮುದಾಯಗಳ ಬಗ್ಗೆ ಒಡನಾಟ ಹಾಗೂ ನಿರಂತರವಾಗಿ ಅವರ ಜೀವನಉದ್ದಕ್ಕೂ ಹೋರಾಟ ಮಾಡುತ್ತಾ ಬಂದಿರುವ ದ್ವಾರಕಾನಾಥ್ ಅವರಿಗೆ ಪರಿಷತ್ತಿಗೆ ನೇಮಕ ಮಾಡಬೇಕು ಎಂದರು.ಅಹಿಂದ ರೂವಾರಿಗಳಾದ ಡಾ. ಪಿ.ಎಸ್. ದ್ವಾರಕನಾಥ ರವರು ಈ ರಾಜ್ಯದಲ್ಲಿ ಶೇಕಡಾ 10 ರಷ್ಟು ಇರುವ ಶೋಷಿತ ಸಮುದಾಯಗಳ ಮತಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಹಾಕಿಸುವಲ್ಲಿ ನಿರಂತರವಾಗಿ ಹಗಲು ಇರಳು ಎನ್ನದೆ ರಾಜ್ಯ ವ್ಯಾಪಿ ಸುತ್ತಾಡಿ ಪಕ್ಷಕ್ಕೆ ಮತ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಕೆ.ಪಿ.ಸಿ.ಸಿ ಚುನಾವಣಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾಗಿ ಹಾಗೂ ಕಳೆದ 2023 ರ ವಿಧಾನ ಸಭಾ ಮತ್ತು 2024 ರ ಲೋಕ ಸಭಾ ಚುನಾವಣೆಯಲ್ಲಿ ಇಡೀ  ರಾಜ್ಯದ ಪ್ರತಿ ವಿಧಾನ ಸಭಾ ಹಾಗೂ ಲೋಕ ಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಿ ಈ ಸಮುದಾಯದ ಮತಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಹಾಕಿಸುವಲ್ಲಿ ತುಂಬಾ ಶ್ರಮಿಸಿದ್ದಾರೆ.ಬಲಿತ ಸಮುದಾಯಗಳ ನಡುವೆ ಬದುಕುತ್ತಿರುವ ಧ್ವನಿ ಇಲ್ಲದ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಮತ್ತು  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಾ. ಸಿ.ಎಸ್. ದ್ವಾರಕನಾಥ ರವರನ್ನು ಎಂ.ಎಲ್.ಸಿ ಮಾಡಬೇಕೆಂದು ಒತ್ತಾಯಿಸಿದರು. ಹಾಗೂ ಇವರನ್ನು ಎಂ.ಎಲ್.ಸಿ ಮಾಡಿದರೆ ಶೋಷಿತ ಸಮುದಾಯದವರಿಗೆ ಸಮಾಜಿಕ ನ್ಯಾಯ ಒದಗಿಸದಂತಾಗುತ್ತದೆ ಹಾಗೂ ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿಯಾಗುತ್ತಾರೆಂದರು.ಸುದ್ದಿಗೋಷ್ಠಿಯಲ್ಲಿ ಬಾಬುಗೋಸಾಯಿ,ಎಲ್.ಶ್ಯಾಮ್,ಮಹಮ್ಮದ್ ಸಮೀವುಲ್ಲಾ,ಕವಿತಾ ಚಂದ್ರಶೇಖರ್ ,ಮುಬಾರಕ್,ಸಾದಿಕ್,ಫೈಯಾಜ್ ಅಹಮದ್ ಉಪಸ್ಥಿತರಿದ್ದರು.