ಮೂಲಭೂತ ಸೌಕರ್ಯಗಳಿಗೆ ವಂಚಿತ ನಾಗರೀಕರು;  ಸರಿಪಡಿಸಲು ಒತ್ತಾಯ

ಸಂಜೆವಾಣಿ ವಾರ್ತೆ
ಹರಿಹರ.ಮೇ.25;  ಯುಜಿಡಿ ಕಾಮಗಾರಿಯಿಂದ ಹದಗೆಟ್ಟ  ರಸ್ತೆಗಳು ಮೂಲಭೂತ ಸೌಕರ್ಯಗಳಿಂದ  ವಂಚಿತರಾಗಿರುವ  ಕೆಎಚ್ ಬಿ ಮತ್ತು  ಅಮರಾವತಿ ಸ್ಥಳೀಯ ನಿವಾಸಿಗಳಿಂದ ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತುಈ ವೇಳೆ  ಮಾಜಿ ದೊಡ್ಡ ಸದಸ್ಯ  ಎಚ್ ನಿಜಗುಣ ಮಾತನಾಡಿ ಕಳೆದ 14 ವರ್ಷಗಳಿಂದ ಬಡಾವಣೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ನರಕ ಯಾತನೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು, ಚರಂಡಿ, ಉತ್ತಮ ರಸ್ತೆ, ಬೀದಿ ದೀಪ ಯಾವುದೇ ಸೌಲಭ್ಯಗಳನ್ನು ನೀಡದಿರುವುದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಅದರಲ್ಲೂ ಅಮರಾವತಿ ಕೆಎಚ್‌ಪಿ ಕಾಮಗಾರಿಯಿಂದ ಪ್ರತಿಯೊಬ್ಬ ನಾಗರಿಕನ ಸೌಲಭ್ಯಗಳನ್ನು ಪಡೆಯುವುದು ಸಾಮಾನ್ಯ ಹಕ್ಕಾಗಿದೆ. ಈ ಹಕ್ಕನ್ನು ಪ್ರತಿಯೊಬ್ಬ ಪ್ರಜೆ ಹೊಂದಬೇಕು ಎಂಬುವುದಕ್ಕಾಗಿ ಸರ್ಕಾರ ಅನುದಾನವನ್ನು ಸಾಕಷ್ಟು ವ್ಯಯಿಸುತ್ತಿದೆ. ಆದರೆ ಈ ಊರಿನ ಜನರು ಮಾತ್ರ ಇವುಗಳಿಂದ ಹರಿಹರ ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳು ಸುಮಾರು ವರ್ಷಗಳಿಂದ  ವರ್ಷಗಳಿಂದ ವಂಚಿತರಾಗಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅಲ್ಲಿಯ ನಿವಾಸಿಗಳು ಲಿಖಿತವಾಗಿ, ಮೌಖಿಕವಾಗಿ ಗ್ರಾಪಂಗೆ ಹಾಗೂ ತಾಪಂ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಇದವರೆಗೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಜನರ ಅಂತರಾಳದ ಧ್ವನಿಯಾಗಿದೆ.ಪ್ರತಿಯೊಬ್ಬ ನಗರಸಭಾ ಸದಸ್ಯರು ಶಾಸಕರು ಮತ್ತು  ಪ್ರತಿನಿಧಿಗಳು    ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಮೂಗಿಗೆ ತುಪ್ಪ ಸವರಿ ಹೋಗುತ್ತಿದ್ದು ಇಲ್ಲಿನ ಜನರ ಸಮಸ್ಯೆಯನ್ನು ಹೇಳೋರು ಕೇಳೋರು ಇಲ್ಲದಂತಾಗಿದೆ.ಪ್ರತಿ ವರ್ಷ ಸರ್ಕಾರ ನಿಗದಿಪಡಿಸಿರುವ ಎಲ್ಲಾ ರೀತಿಯ ತೆರಿಗೆಗಳನ್ನು  ನಿವಾಸಿಗಳು ತಪ್ಪದೆ ಕಟ್ಟುತ್ತಾ ಬರುತ್ತಿದ್ದಾರೆ. ಜನರಿಂದ ತೆರಿಗೆ ಭರಿಸಿಕೊಳ್ಳುವ  ಪ್ರತಿವರ್ಷ ಸಿದ್ಧಪಡಿಸುವ ಕ್ರಿಯಾಯೋಜನೆಯಲ್ಲಿ ಮಾತ್ರ ಈ ಎಲ್ಲ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತಿಲ್ಲ ಎಂಬುವುದು ಜನರ ಅಳಲಾಗಿದೆ.ಮೂಲಭೂತ ಸೌಕರ್ಯಗಳ ವಂಚಿತರಾಗಿರುವ ಬಡಾವಣೆಗಳಿಗೆ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಂತಾಂತವಾಗಿ ಹೋರಾಟಗಳನ್ನು ಮಾಡಬೇಕಾಗುತ್ತದೆ ಅದಕ್ಕೆ ಆಸ್ಪದ ಕೊಡದೆ ಬಡಾವಣೆಯ ನಿವಾಸಿಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಅಧಿಕಾರಿಗಳು ಮಾಡಬೇಕೆಂದು ಒತ್ತಾಯಿಸಿದರು ಮನವಿಯನ್ನ ಸ್ವೀಕರಿಸಿ  ಆಯುಕ್ತ ಬಸವರಾಜ್ ಐ  ಮಾತನಾಡಿ ನಗರ ಮತ್ತು ಇತರರೆ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ  ನಾವು ಮತ್ತು ನಮ್ಮ ಇಂಜಿನಿಯರ್ ತಂಡ ಭೇಟಿ ಪರಿಶೀಲನೆ ಮಾಡಲಾಗಿದೆ ಅಮರಾವತಿ ಕೆ ಹೆಚ್ ಪಿ ಕಾಲೋನಿಗೆ ಕೂಡಲೇ ಸ್ಥಳಕ್ಕೆ ಆಗಮಿಸಿ ಅಲ್ಲಿನ ಪರಿಸ್ಥಿತಿಗಳನ್ನು ಪರಿಶೀಲಿಸಿ ಕುಂದು ಕೊರತೆಗಳನ್ನು ಸರಿಪಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು ರಾಮ್ ಮೂರ್ತಿ.ರೇವಣಸಿದ್ದಪ್ಪ. ಪರಶುರಾಮ್ ಗೌಳಿ.ವೀರಯ್ಯ. ಏರಿಸ್ವಾಮಿ. ಚಂದ್ರಶೇಖರ್ ಸತೀಶ್ ಪ್ರದೀಪ್ ತೆಲ್ಕರ್. ಆಟೋ ನಾಗರಾಜ್. ಮಲ್ಲಿಕಾರ್ಜುನಪ್ಪ. ಮಾಲತೇಶ್  ಬ್ಯಾಂಕ್. ಮಾರುತಿ ರಾಯ್ಕರ್. ಸ್ಥಳೀಯ ನಿವಾಸಿಗಳು ಇದ್ದರು.