ಮಳೆಗೆ ಕುಸಿದ ಮನೆ; ಮಕ್ಕಳಿಗೆ ಗಾಯ

ಸಂಜೆವಾಣಿ ವಾರ್ತೆ
ಜಗಳೂರು.ಮೇ.೨೫ -: ತಾಲೂಕಿನ ಹುಚ್ಚವ್ವನಹಳ್ಳಿ ಹಳೆಯ ಮಾಳಿಗೆ ಮನೆ ಕುಸಿದು ಮನೆಯ ಕುಟುಂಬದವರು ಸ್ವಲ್ಪ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ತಾಲೂಕಿನಾದ್ಯಂತ ಸುಮಾರು ಎರಡು ಮೂರು ದಿನಗಳ ಹಿಂದೆ ಸುರಿದ ಬಾರಿ ಮಳೆ ಪರಿಣಾಮ ಹಿರೇಮಲ್ಲನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚವ್ವನಹಳ್ಳಿ ಗ್ರಾಮದ ಸನಾವುಲ್ಲ ಎಂಬುವವರು ವಾಸವಿದ್ದ ಮಾಳಿಗೆ ಮನೆ ಏಕಾಏಕಿ ಇಂದು ಬೆಳಿಗ್ಗೆ ಕುಸಿದಿದೆ . ಮನೆಯ ರೂಂಗಳಲ್ಲಿದ್ದ ಕುಟುಂಬ ವರ್ಗದ ವರು ಕಿರಿಚಾಡಿ ಕೊಂಡು ಹೊರಗಡೆ ಓಡಿ ಬರುವ ವೇಳೆ ಚಿಕ್ಕ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಕೂದಲೆಳೆ ಅಂತರ ದಲ್ಲಿ, ಪ್ರಾಣಪಾಯದಿಂದ ಪಾರಾಗಿದ್ದಾರೆ ಸನಾವುಲ್ಲ ಎಂಬ ವ್ಯಕ್ತಿ ಕುಸಿತಕ್ಕೆ ಸಿಲುಕಿದ್ದು ತಕ್ಷಣ ಅಕ್ಕಪಕ್ಕ ಮನೆಯರ ಸಹಾಯದಿಂದ ಹೊರ ತಂದಿದ್ದಾರೆ,ಮನೆ ಬಿದ್ದ ತಕ್ಷಣವೇ ಸನಾವುಲ್ಲ ಮಗ ಜಾವಿದ್ ತಲೆಗೆ ಮತ್ತು ದೇಹಕ್ಕೆ ಬಲವಾದ ಪೆಟ್ಟು ಬಿದ್ದ ಪರಿಣಾಮವಾಗಿ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಜಗಳೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದ್ಯುದಿದ್ದಾರೆ. ಆದರೆ ಮಗುವನ್ನು ವೈದ್ಯರ ಸಲಹೆಯಂತೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ದೂರು ದಾಖಲಾಗಿದೆ ಮಾಳಿಗೆ ಮನೆ ಬಿದ್ದಿರುವ ವಿಷಯ ತಿಳಿದತಕ್ಷಣ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಹಾಗೂ ಕಂದಾಯ ನಿರೀಕ್ಷಕ ಧನಂಜಯ್ ಗ್ರಾಮ ಲೆಕ್ಕಾಧಿಕಾರಿ ಸರ್ವಶ್ರೀ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಮಾತನಾಡಿದ ಅವರು ಈ ಮನೆ ಮಣ್ಣುಮಿಶ್ರಿತ ಕಟ್ಟಡವಾಗಿ ದ್ದು ಇತ್ತೀಚಿಗೆ ಸುರಿದ ಭಾರಿ ಮಳೆಗೆ ಮನೆ ಸಂಪೂರ್ಣ ತೇವಾಂಶ ಗೊಂಡಿದ್ದರಿಂದ ಇದ್ದಕ್ಕಿದ್ದಂತೆ ಈ ಮನೆಯ ಮೇಲ್ಚಾವಣಿ ಕುಸಿತಕ್ಕೆ ಕಾರಣವಾಗಿರಬಹುದು ಸಾರ್ವಜನಿಕರು ತುಂಬಾ ಹಳೆಯ ಕಾಲದ ಮನೆಗಳಿದ್ದರೆ ಎಚ್ಚರಿಕೆಯಿಂದ ವಾಸ ಮಾಡಬೇಕು ಈ ಮನೆಯಲ್ಲಿ ರಾತ್ರಿ ಸಮಯದಲ್ಲಿ ಮಲಗಿದ್ದಾಗ ಇಂತಹ ಘಟನೆ ನಡೆದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಆದರೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ತಾತ್ಕಲಿಕವಾಗಿ ಬೇರೆ ಕಡೆ ವಾಸ ಮಾಡಿ ನಿಮ್ಮೊಂದಿಗೆ ತಾಲೂಕು ಆಡಳಿತ ಸದಾ ಜೊತೆಯಲ್ಲಿರುತ್ತೆ ಎಂದು ಕುಟುಂಬ ವರ್ಗದವರಿಗೆ ಧೈರ್ಯ ತುಂಬಿದರು ಈ ಮನೆ ಹಾನಿಗೆ ಸಂಬಂಧಿಸಿದಂತೆ ಸರ್ಕಾರ ದಿಂದ ಸಿಗುವ ಪರಿಹಾರವನ್ನು ಕೊಡಿಸುತ್ತೇವೆ ಶೀಘ್ರದಲ್ಲಿ ಶಾಸಕರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ಹೊಸ ಮನೆ ಮಂಜೂರಾತಿ ಮಾಡಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು