ಹೆಚ್ಚಿದ ತಾಪಮಾನದಲ್ಲಿ ಪಕ್ಷಿಗಳಿಗೆ ನೀರುಣಿಸಿ ಅವುಗಳ ಜೀವ ಉಳಿಸಿ: ವೀರಭದ್ರಪ್ಪ ಉಪ್ಪಿನ
ಬೀದರ:ಮೇ.25: ತಾಪಮಾನವು ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಉಷ್ಣಾಂಶವು ಗರಿಷ್ಠ ಮಟ್ಟಕ್ಕೆ ಮುಟ್ಟುತ್ತಿದೆ. ಬಿಸಿಲಿನ ತಾಪದಿಂದ ಪಶು, ಪ್ರಾಣಿ ಸಂಕುಲವು ಚಡಪಡಿಸುತ್ತಿವೆ. ಅವುಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಪಶುವೈದ್ಯಕೀಯ ವಿಶ್ವ ವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ಜನತೆಗೆ ಕರೆ ನೀಡಿದರು. ಅವರು ಇಂದು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ವತಿಯಿಂದ, ನಗರದ ಬಿವಿಬಿ ಕಾಲೇಜಿನ ಎದುರುಗಡೆ ಆಚರಿಸಲಾದ ವಿಶ್ವ ಜೀವ ವೈವಿಧ್ಯತೆ ದಿನಾಚರಣೆ ಯಲ್ಲಿ ಮಾತನಾಡುತ್ತಿದ್ದರು. ಗುಬ್ಬಚ್ಚಿ, ಪಾರಿವಾಳ, ಕಾಗೆ ಮುಂತಾದ ಪಕ್ಷಿಗಳು ಕುಡಿಯಲು ನೀರು ಸಿಗದೆ ಸಾವನ್ನಪ್ಪುತ್ತಿವೆ. ಇರುವ ಅರಣ್ಯವು ನಷ್ಟವಾಗಿ ಮೂಕ ಪಕ್ಷಿಗಳ ಸಂಕುಲವು ಅನುಭವಿಸುತ್ತಿರುವ ತೊಂದರೆಗಳನ್ನು ನಿವಾರಿಸುವುದು ಮನುಷ್ಯನ ಕರ್ತವ್ಯವಾಗಿದೆ ಎಂದರು.
ಮುಂದೆ ಬರಲಿರುವ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಾ ರೋಪರೋಪಣೆಯನ್ನು ಮಾಡುವ ಮೂಲಕ ನಾಶವಾಗುತ್ತಿರುವ ಅರಣ್ಯ ಪ್ರದೇಶವನ್ನು ಹೆಚ್ಚುವಂತೆ ಮಾಡಬೇಕೆಂದು ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿಯವರು ಕರೆ ನೀಡಿದರು. ಅರಣ್ಯವನ್ನು ಜೋಪಾನವಾಗಿರಿಸಿ, ಅದನ್ನು ಇನ್ನು ಹೆಚ್ಚಿಸಿದರೆ, ಒಣ ಬರಗಾಲ ಬರದಂತೆ ನೋಡಿಕೊಳ್ಳಬಹುದು, ಪರಿಸರವು ಸಮತೋಲನ ವಾಗಿರುವುದುಎಂದು ನುಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು. ಬಾಟಲ್ ಗಳನ್ನು ಉಪಯೋಗಿಸಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಸಾನವಿ, ತನುಷ, ಪ್ರಗ್ಯಾನ, ಸಂಜೀವ ಶೆಟ್ಟಿ, ದಿಲೀಪ್, ಸೋಮಣ್ಣ, ಅಹಮದ ಪಟೇಲ್, ತುಕಾರಾಮ, ಸಾಮಸನ, ದಿಲೀಪ ಭೋಸಲೆ, ಜೋಸೆಫ್, ನಾಗಯ್ಯ, ಕಲ್ಲಪ್ಪ, ಮಂಜುನಾಥ್ ಮುಂತಾದವರು ಹಾಜರಿದ್ದರು.