ಗೌತಮ ಬುದ್ದರ ಸಂದೇಶ ಸರ್ವಕಾಲಿಕ ಹಾಗೂ ಸದಾ ಅನುಕರಣೀಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೪: ಸಹಾನುಭೂತಿ ದಯೆ ಮತ್ತು ಪ್ರೀತಿಯ ಮೇಲೆಯೇ ಜಗತ್ತು ನಿಂತಿದೆ ಎನ್ನುವ ಗೌತಮ ಬುದ್ದರ ಸಂದೇಶ ಸರ್ವಕಾಲಿಕ ಹಾಗೂ ಸದಾ ಅನುಕರಣೀಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ .ಎಚ್.ಅರುಣ್ ಕುಮಾರ್ ಹೇಳಿದರು.ನಗರದ ಕೆ.ಬಿ.ಬಡಾವಣೆಯಲ್ಲಿರುವ ಸ್ಪೂರ್ತಿ ಸಾಂಸ್ಕçತಿಕ ಸೇವಾ ಸಂಘದ ಕಾರ್ಯಾಲಯದಲ್ಲಿ ನಡೆದ ಬುದ್ದ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಹಿಂಸೆ , ಜೀವನದ ಗೌರವ ಮತ್ತು ಮಹಿಳೆಯರಿಗೆ ಸಮಾತೆಯ ಭೋಧನೆಗಳಿಂದಾಗಿ ಬೌದ್ದ ಧರ್ಮವು ಜನಪ್ರಿಯೆತೆಯನ್ನು ಗಳಿಸಿತು. ಭಾರತವನ್ನು ಜಗತ್ತಿನ ಇತರೆ ದೇಶಗಳು ಇಂದಿಗೂ ಬುದ್ದನ ನಾಡು ಎಂದೇ ಗುರುತ್ತಿಸುತ್ತದೆ. ಬುದ್ದ ಕೇವಲ ನೆನಪಲ್ಲ ಅದು ಸಮಾಜದ ಶಕ್ತಿಯ ಸೂಚಕ ಎಂದರು.ಕ್ರೌರ್ಯ , ಮೌಢ್ಯ, ಅಸಮಾನತೆ, ಕಂದಾಚಾರಗಳಂತಹ ಸ್ಥಾಪಿತ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ , ಸಮಾನತೆಯ ಹಾದಿ ತೋರಿದ ಗೌತಮ ಬುದ್ದರು ಸಮಾಜದ ದೇವರು ಧರ್ಮ ಬಗ್ಗೆ ಮಾತನಾಡುತ್ತಿದ್ದಾಗ ಗೌತಮ ಬುದ್ದರು ಮನುಷ್ಯನ ಬಗ್ಗೆ ಮಾತನಾಡಿ ಮಾನವ ಬದುಕಿಗೆ ಘನತೆ ತಂದು ಕೊಟ್ಟವರು ಎಂದರು.ನಿವೃತ್ತ ಉಪನ್ಯಾಸಕರಾದ ಎಸ್ ಎಂ ಮಲ್ಲಮ್ಮ ಮಾತನಾಡಿ, ಬುದ್ದ ಬಸವರ ಚಿಂತನೆಗಳು ಹಿಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಅಹಿಂಸೆ ಮತ್ತು ಕರುಣೆಯ ಸಮಾಜವನ್ನು ಗೌತಮ ಬುದ್ದರು ಬಯಸಿದ್ದರು ಎಂದರು.ಕವಿಯತ್ರಿ ಸತ್ಯಭಾಮ ಮಂಜುನಾಥ ಮಾತನಾಡಿ, ಬುದ್ದ ಮಾನವೀಯ ಮೌಲ್ಯಗಳನ್ನು ಪಸರಿಸಿದ ಮನುಕುಲದ ಮಹಾಬೆಳಕು ಎಂದು ವರ್ಣಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ , ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಪರಮೇಶ್ವರಪ್ಪ ಸಿರಿಗೆರೆ, ಕುಮಾರ ಅನೆಕೊಂಡ, ಸಾಹಿತಿ ಎಸ್.ಸಿದ್ದೇಶ್ ಕುರ್ಕಿ, ವಕೀಲರಾದ ಆರ್ ಯೋಗೀಶ್ವರಪ್ಪ. ಸ್ಪೂರ್ತಿ ಸಾಂಸ್ಕçತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್.ರಾಜು ನಿರೂಪಿಸಿ, ಸ್ವಾಗತಿಸಿದರು. ರಂಗಭೂಮಿ ಕಲಾವಿದರಾದ ಶಿವಾಜಿ ರಾವ್, ಮಾರ್ತಾಂಡಪ್ಪ ಇದ್ದರು.