ಅಧರ್ಮದ ದಾರಿ ಬಿಟ್ಟು ಧರ್ಮದ ದಾರಿಯಲ್ಲಿ ನಡೆಯಿರಿ: ಶಿವಸಿದ್ದ ಶ್ರೀ
ಹುಮನಾಬಾದ್: ಮೇ.25:ಪ್ರತಿಯೂಬ್ಬರು ಅಧರ್ಮದ ದಾರಿಯನ್ನು ಬಿಟ್ಟು ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಬೆಳಗಾಂವ ಮುಕ್ತಿ ಮಠದ ಪೀಠಾಧಿಪತಿ ತಪೆÇೀರತ್ನ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿ ನುಡಿದರು.
ಚಿಟಗುಪ್ಪಾ ತಾಲ್ಲೂಕಿನ ಇಟಗಾ ಗ್ರಾಮದ ಶಿವಸಿದ್ದ ಯೋಗಾಶ್ರಮ ಶಾಖಾ ಮುಕ್ತಿ ಮಠದಲ್ಲಿ ನಡೆದ ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳ ಪ್ರಥಮ ಪುಣ್ಯಸ್ಮರಣೋತ್ಸವ ಆಚರಣೆ ಪುರ್ವಭಾವಿ ಸಭೆ ಹಾಗೂ ಶಿವಾನುಭವ ಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಾಯಿ ಅಮೃತ ಹಸ್ತದಿಂದ ಮಾಡಿದ ಊಟ ಏಲ್ಲಕ್ಕಿಂತ ಶ್ರೇಷ್ಠವಾದ ಅಮೃತವಿದಂತೆ ಅದರಲ್ಲಿ ತಾಯಿ ಕಳಕಳಿ ಪ್ರತಿ ಮಮತೆ ತುಂಬಿರುತ್ತದೆ. ಎಲ್ಲಿ ದಾನ ಧರ್ಮ ಇದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ. ಎಂದರು.
ದೇವರು ಭಕ್ತನನ್ನು ಅನಂತ ರೀತಿಯಲ್ಲಿ ಪರೀಕ್ಷಿಸುತ್ತಾನೆ. ನಮಗೆ ಯಾರು ಕಷ್ಟದ ಸಮಯದಲ್ಲಿ ಸಹಾಯ ಸಹಕಾರ ನೀಡುತ್ತಾರೆ ಅವರೆ ನಿಜವಾದ ದೇವರಿದಂತೆ. ಮನುಷ್ಯ ತನ್ನಲ್ಲಿರುವ ದ್ವೇಶ, ಅಸುಹೆ ಅಹಂಕಾರವನ್ನು ದೂರಮಾಡಿ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣಿ ಉತ್ತಮ ಬದುಕು ಸಾಗಿಸಬೇಕು, ಎಂದರು.
ಮುಂಬರುವ ಜೂನ 16ರಂದು ನಡೆಯಲಿರುವ ದಿ. ಶ್ರೀ ಚನ್ನಮಲ್ಲೇಶ್ವರರ ತ್ಯಾಗಿಗಳ ಪ್ರಥಮ ಪೂಣ್ಯಸ್ಮರಣೋತ್ಸವವನ್ನು ಎಲ್ಲರು ಕುಡಿ ಅರ್ಥ ಪುರ್ಣವಾಗಿ ಆಚರಿಸೋಣ, ಅದಕ್ಕೆ ಎಲ್ಲರ ಸಹಾಯ, ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಹೀರೆಮುನ್ನೂಳೆ ಮಠದ ಶಂಭುಲಿಂಗ ಶಿವಾಚಾರ್ಯ, ಧಾರವಾಡ ಬೆನಕನಳ್ಳಿ ಪ್ರಭಯ್ಯ ಸ್ವಾಮಿ ಸಾನಿದ್ಯ ವಹಿಸಿ ಮಾತನಾಡಿದರು.
ಮಠದ ಅಧ್ಯಕ್ಷ ಇಂದ್ರಣ್ಣಾ ಮೈಲುರಕರ್, ವೀರಶೆಟ್ಟಿ ಮಾಲಿ ಪಾಟೀಲ, ಅಶೋಕ ಚೌದ್ರಿ, ಶ್ರೀನಿವಾಸ ರೆಡ್ಡಿ, ಸುರೇಶ ಪಂಚಾಳ, ಮಲ್ಲಿಕಾರ್ಜುನ ಮೈಲುರ, ಖೇಣಿರಂಜೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಭದ್ರೇಶ್ ಖೇಣಿ, ವಿಜಯಕುಮಾರ ಖೇಣಿ, ಪ್ರಭು ರೆಡ್ಡಿ ಬುದೇರಾ, ಮಾಣಿಕರೆಡ್ಡಿ ಚೀನಕೇರಿ, ಪರಿಸರವಾದಿ ಶೈಲೇಂದ್ರ ಕಾವಡಿ, ಸಂಗೀತ ಕಲಾವಿದರಾದ ರಮೇಶ ಪಂಚಾಳ, ಮನೋಹರ ಕಣಜಿ, ಮಾಣಿಕಪ್ಪಾ ಹಣಮಂತವಾಡಿ ವೀರಶೆಟ್ಟಿ ಹಳ್ಳಿಖೇಡ, ಸೋಮಯ್ಯ ಇದ್ದರು.