ಗಿರಿಜಾ ಕುಟುಂಬಕ್ಕೆ ಮಲ್ಲಿಕಾರ್ಜುನ್ ಆರ್ಥಿಕ ನೆರವು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.24:ಇಡೀ ಕುಟುಂಬವನ್ನೆ ಕಳೆದುಕೊಂಡು ಅನಾಥರಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಮಾಜ ಸೇವಕರು ಹಾಗು ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಆತ್ಮಸ್ಥೈರ್ಯ ತುಂಬಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲ್ಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಪಂಚಾಯಿತಿ ವ್ಯಾಪ್ತಿಯ ಬಳ್ಳೇಕೆರೆ ಗ್ರಾಮದ ನೀರುಗಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಬಳ್ಳೇಕರೆ ಗ್ರಾಮದ ಗಿರಿಜಾ ಮಹಾದೇವ (34) ಕಳೆದ ಒಂದು ವಾರದ ಹಿಂದೆ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮ ಮುಗಿಸಿಕೊಂಡು ತಂಡೆಕೆರೆಗೆ ಬಂದು ಅಲ್ಲಿಂದ ದ್ವಿಚಕ್ರ ವಾಹನ ಮೂಲಕ ಗಿರಿಜಾ ಹಾಗೂ ಹುಣಸನಹಳ್ಳಿ ನೀರುಗಂಟಿ ಪ್ರಭಾವತಿ ಅವರು ಸ್ವಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಟ್ಟಿದ್ದರು. ಮೃತ ಗಿರಿಜಾ ಅವರ ಪತಿ ಮಹದೇವ ಕಳೆದ ವರ್ಷ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು.ಜೊತೆಗೆ ಒಂದು ವರ್ಷದ ಅವಧಿಯಲ್ಲಿ ಕುಟುಂಬದ ನಾಲ್ಕು ಜನ ಸಾವಿಗೀಡಾಗಿದ್ದು ಈ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೀರುಗಂಟಿ ಕೆಲಸ ನಿರ್ವಹಿಸುತ್ತಾ ಕುಟುಂಬದ ಆಧಾರ ಸ್ತಂಭವಾಗಿದ್ದ ಗಿರಿಜಾ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟು ಮಗ ಸಿದ್ದಾರ್ಥ್, ಮಗಳು ಸುಕನ್ಯ ಇಬ್ಬರು ಮಕ್ಕಳು ತಂದೆ, ತಾಯಿ,ತಾತ ಅಜ್ಜಿ,ದೊಡ್ಡಪ್ಪ, ಅವರನ್ನ ಕಳೆದುಕೊಂಡು ಅನಾಥರಾಗಿರುವ ಹಿನ್ನಲೆಯಲ್ಲಿ.
ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಮೃತರ ಮನೆಗೆ ಭೇಟಿ ನೀಡಿ ಮಕ್ಕಳ ಯೋಗ ಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯದ ಜೊತೆಗೆ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರ ಮುಖಾಂತರ ಆರ್ಥಿಕ ನೆರವು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಚರಣತಿಲಕ್, ಗ್ರಾ.ಪಂ.ಸದಸ್ಯೆ ಸವಿತಾ ಇಂದ್ರೇಶ್,ಶಾಲಾ ಮುಖ್ಯ ಶಿಕ್ಷಕ ನಿಂಗೇಗೌಡ,ಸಹ ಶಿಕ್ಷಕರಾದ ಮಹೇಶ್ ಕುಮಾರ್,ಅಂಗನವಾಡಿ ಕಾರ್ಯಕರ್ತೆ ರಾಧ, ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್ ,ಉಪಾಧ್ಯಕ್ಷ ನರಸಿಂಹರಾಜು,ಸದಸ್ಯರಾದ ಶಿವಕುಮಾರ್,ಶಿವಮ್ಮ,ಮಲ್ಲೇಶ್,ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ,ಗ್ರಾಮಸ್ಥರಾದ ಮಲ್ಲಪ್ಪ,ಸುಶೀಲಮ್ಮ, ವೀಣಾ, ಗಾಯತ್ರಮ್ಮ, ರತ್ನಮ್ಮ, ಸಣ್ಣಮ್ಮ, ದೇವಿರಮ್ಮ, ಮಣಿಯಮ್ಮ, ಕಾಂತಶೆಟ್ಟಿ,ಶಾಂತಮ್ಮ, ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.