ಈದ್ ಮಿಲಾದ್ ಅನ್ನಸಂತಾರ್ಪಣೆ ಸೇವೆ: ಸೂರ್ಯವಂಶಿ ಶ್ಲಾಘನೆ
ಕಲಬುರಗಿ,ಸೆ.೨೪- ಈದ್ ಮಿಲಾದ್ ಹಬ್ಬದ ಉತ್ಸವ ಅನ್ನ ಸಂತಾರ್ಪಣೆಯ ಮೂಲಕ ಆಚರಿಸುವ ಇಲ್ಲಿನ ವ್ಯಾಪಾರಿ ಬಂಧುಗಳ ಸೇವೆ ಶ್ಲಾಘನಿಯ ಮತ್ತು ಮಾದರಿಯಾಗಿದೆ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಹೇಳಿದರು.
ಇಲ್ಲಿನ ಸುಪರ ಮಾರುಕಟ್ಟೆಯಲ್ಲಿ ಸಿಟಿ ಬಸ್ ಸ್ಟಾö್ಯಂಡ್ ಅಸೋಶಿಯೇಷನ್, ಆಲುಬಾತ ಬಂಡಿ, ಹಣ್ಣು ಹಂಪಲ ವ್ಯಾಪಾರಿಗಳು ಮತ್ತು ಸುಪರ ಮಾರುಕಟ್ಟೆ ಬಿಜಿನಿಸ್ ಅಸೋಶಿಯೇಷನ್ ಆಯೋಜಿಸಿದ್ದ ಈದ್ ಮಿಲಾದ್ ಉತ್ಸವ ಮತ್ತು ಅನ್ನಸಂತಾರ್ಪಣೆ ಕಾರ್ಯಕ್ರಮದಲ್ಲಿ ಆಯೋಜಕರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಲ್ಲಿ ಕಳೆದ ೨೫ ವರ್ಷಗಳಿಂದ ಈ ಉತ್ಸವ ಮತ್ತು ಪ್ರಸಾದ ಸೇವೆ ಮಾಡುತ್ತಿರುವ ತಮ್ಮೇಲ್ಲರಿಗೂ ಅಲ್ಲಾಹನು ಆರೋಗ್ಯ ಹಾಗೂ ವ್ಯಾಪಾರದಲ್ಲಿ ವೃದ್ದಿಯನ್ನು ತರಲಿ ಎಂದು ಶುಭ ಹಾರೈಸಿದರು.
ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕ ಮಂಜುನಾಥ ನಾಲ್ವರಕರ್ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಬ್ಬದ ಈ ಸೇವೆ ಸಹೋದರೆತೆಯ ಸಂಕೇತವಾಗಿದೆ, ಇಲ್ಲಿಗೆ ಬರುವ ಎಲ್ಲ ವರ್ಗದ ಜನರಿಗೆ ಅನ್ನಸಂತಾರ್ಪಣೆಯ ಮೂಲಕ ಹಬ್ಬ ಆಚರಿಸುವ ಸೌಭಾಗ್ಯ ಕಲ್ಪಿಸಿದ ಅಲ್ಲಾಹನಿಗೆ ಎಲ್ಲರೂ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಗಳ ಮುಖಂಡರಿಗೆ ಮತ್ತು ಆಯೋಜಕರಿಗೆ ಬೀದಿ ವ್ಯಾಪಾರಿಗಳ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಾವೀದ, ಕಂಯ್ಯುಮ, ಮಜೀದ, ಅಜ್ಮೀರ, ಸಲ್ಮಾನಬ್, ಇಮ್ರಾನ್, ಅಖಿಲ, ಇಸ್ಮಾಯಿಲ್ ಸೇರಿದಂತೆ ಸಂಘಟನೆ ಪ್ರಮುಖರು, ಗಣ್ಯಮಾನ್ಯರು ಭಾಗವಹಿಸಿದ್ದರು.