ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಉತ್ತಮ ಸಾಧನೆ
ಚಿಂಚೋಳಿ,ಸೆ.೨೪- ಇತ್ತೀಚೆಗೆ ಚಿಂಚೋಳಿಯ ಚಂದಾಪುರ ಪಟ್ಟಣದ ಬಂಜಾರ ಭವನದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವತಿಯಿಂದ ನಡೆದಂತಹ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಾಪುರದ ೨ನೇ ತರಗತಿಯ ಸಾನ್ವಿ ತಂದೆ ರಾಜೇಂದ್ರ ಪ್ರಸಾದ್ ಎಂಬುವ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ ಲಕ್ಷ್ಮಯ್ಯ ಹಾಗೂ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ವಿದ್ಯಾರ್ಥಿಯ ಈ ಸಾಧನೆಗೆ ಶುಭ ಹಾರೈಸಿ ಅಭಿನಂದಿಸಲಾಯಿತು.