ಪೌರ ಕಾರ್ಮಿಕರ ಸೇವೆ ಮಾದರಿ:ಡಾ.ಹುಕ್ಕೇರಿ
ತಾಳಿಕೋಟೆ:ಸೆ.೨೪: ನಾಡಿನಲ್ಲಿ ಅನೇಕ ಜನರು ಸೇವೆ ಸಲ್ಲಿಸುತ್ತಾರೆ ಆದರೆ ಸ್ವಚ್ಚತೆಯ ಕಡೆಗೆ ಯಾರೂ ಗಮನ ಹರಿಸುವದಿಲ್ಲಾ ಆದರೆ ಪೌರ ಕಾರ್ಮಿಕರು ಇಡೀ ದೇಶದ ಜನರ ಆರೋಗ್ಯ ಕಾಪಾಡಲು ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಅವರು ನಸುಕಿನ ಜಾವ ಮಾಡುವ ಸ್ವಚ್ಚತಾ ಕಾರ್ಯ ಮಾದರಿಯಾಗಿದೆ ಎಂದು ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ ಅವರು ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಆಯೋಜಿಸಲಾದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ನೇತ್ರ ತಪಾಸಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಅನಾರೋಗ್ಯವೆಂಬುದು ಎಲ್ಲಿ ಹುಟ್ಟುತ್ತದೆಯೋ ಅದನ್ನೇ ಮಟ್ಟ ಹಾಕುವಂತಹ ಕಾರ್ಯ ಪೌರಕಾರ್ಮಿಕರಿಂದ ನಿತ್ಯ ನಡೆಯುತ್ತದೆ ಆದರೆ ಎಲ್ಲ ಸೇವಾ ಕಾರ್ಯಕರ್ತರನ್ನು ಗುರುತಿಸುತ್ತೇವೆ ಇಡೀ ದೇಶದ ಜನರ ಆರೋಗ್ಯವನ್ನು ಕಾಪಾಡುವ ಪೌರ ಕಾರ್ಮಿಕರನ್ನು ಯಾರೂ ಗುರುತಿಸುವದಿಲ್ಲಾ ಅವರ ಸೇವೆ ಯಾರೂ ಸಲ್ಲಿಸಲಾಗದ ಸೇವೆ ಯಾಗಿದ್ದು ಅವರೂ ನಮ್ಮ ನಡುವೆ ಗುರುತಿಸುವಂತಹ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದ ಅವರು ಅವರ ಆರೋಗ್ಯ ದೃಷ್ಠಿಯಿಂದ ಸರ್ಕಾರವು ಉಚಿತ ಆರೋಗ್ಯ ತಪಾಸಣೆಯನ್ನು ಪ್ರತಿ ವರ್ಷ ನಡೆಸಿ ಅವರಿಗೆ ಗೌರವಿಸುವಂತಹ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ ಅವರು ಸರ್ಕಾರದಿಂದ ನೀಡಲಾದ ವಿಶೇಷ ಭತ್ಯ ಮತ್ತು ಸಮವಸ್ತç, ಅಲ್ಲದೇ ಸುರಕ್ಷತಾ ಸಲಕರಣೆಗಳು ಪೌರ ಕಾರ್ಮಿಕರಿಗೆ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಮಯದಲ್ಲಿ ಪೌರ ಕಾರ್ಮಿಕರಿಗಾಗಿ ಆಯೋಜಿಸಲಾದ ಮಹಿಳೆಯರ ವೈಯಕ್ತಿಕ ಮತ್ತು ಪುರುಷರ ಗುಂಪು ಆಟಗಳಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಭಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಪೌರ ಕಾರ್ಮಿಕರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ವತಿಯಿಂದ ಪೌರ ಕಾರ್ಮಿಕರಿಗೆ ಉಚಿತ ನೇತ್ರ ತಪಾಸಣೆ ಮಾಡಲಾಯಿತು.
ವೇದಿಕೆಯ ಮೇಲೆ ಪುರಸಭಾ ಸದಸ್ಯ ಮುತ್ತಪ್ಪಣ್ಣ ಚಮಲಾಪೂರ, ಹಾಗೂ ಪ್ರಶಾಂತ ಜವಳದ, ವಿಜಯಲಕ್ಷಿö್ಮÃ ಬೆಳವಾಡಿ, ಸಿದ್ದಮ್ಮ ಬ್ಯಾಲ್ಯಾಳ, ಸುನೀಲ ದನ್ರಕರ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಅಮ್ರಣ್ಣವರ, ಶಂಕ್ರಗೌಡ ಬಿರಾದಾರ, ಆರೋಗ್ಯ ನಿರಿಕ್ಷಕ ಶಿವಾನಂದ ಜುಮನಾಳ, ಶ್ರೀಪಾದ ಜೋಶಿ, ಆನಂದ ನಾಯಕ, ಆಯ್.ಎಚ್.ಮಕಾಂದಾರ, ಬೀರಪ್ಪ ಶೆಟ್ಟೆಪ್ಪಗೋಳ, ಡಿ.ಬಿ.ಜಾನ್ವೇಕರ, ಪ್ರಭು ನಾಲತವಾಡ, ಸಿದ್ದಪ್ಪ ಕೊಳ್ಳಿ, ಅನುಗ್ರಹ ಆಸ್ಪತ್ರೆಯ ಮಹಾಂತೇಶ ಒಳಗೊಂಡು ಮೊದಲಾದವರು ಇದ್ದರು.