ಸ್ವಚ್ಛತೆಯ ಯಾವುದೇ ಕೆಲಸ ಕಾಯಕ:ಬೈಚಬಾಳ
ಬಸವನ ಬಾಗೇವಾಡಿ:ಸೆ.೨೪: ಮನುಷ್ಯನ ಸುಖ ಜೀವನದಲ್ಲಿದೆ , ಜೀವನ ಕೆಲಸದಲ್ಲಿದೆ . ಕೆಲಸ ಯಾರ ಗೌರವವನ್ನು ತಗ್ಗಿಸುವುದಿಲ್ಲ . ಶರಣರು ಸ್ವಚ್ಛತೆಯ ಯಾವುದೇ ಕೆಲಸ ಮಾಡಿದರೂ ಅದಕ್ಕೆ ಕಾಯಕ ಎ೦ದು ಅದನ್ನು ದೈವತ್ವಕ್ಕೆರಿಸಿದರು . ಅಂತಹ ಕಾಯಕದ ಕಾಲ ಬಳಿ ಸ್ವರ್ಗ ಬಿದ್ದಿದೆ ಎ೦ದು ಸಾಹಿತಿ ಶಂಕರ ಬೈಚಬಾಳ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಯಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತ ಮನಗೊಳಿಯ ರಸ್ತೆಗಳಲ್ಲಿ ಹಾಲಿನ ತ್ವೊರೆ ಬರಲಿ ,ಸಕ್ಕರೆಯ ಮಳಲಾಗಲಿ ಎ೦ದು ಶರಣರ ವಚನಗಳನ್ನು ನೆನೆಸಿಕೊಂಡರು.
ಕಾರ್ಯಕ್ರಮದ ಇನ್ನೊಬ್ಬ ಅತಿಥಿ ಸಿದ್ಧರಾಮ ಬಿರಾದಾರ ಮಾತನಾಡಿ ಪೌರಕಾರ್ಮಿಕರ ಸೇವೆಯನ್ನು ಸ್ಮರಿಸುವ ಈ ದಿನ ಬಹಳ ಮಹತ್ವಪೂರ್ಣವಾದುದು ಎ೦ದು ಅಭಿಪ್ರಾಯಪಟ್ಟರು
ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಬ್ಬೀರ ರೇವೂರಕರ ಅವರು ವಹಿಸಿ ಮಾತನಾಡುತ್ತಾ , ಪೌರಕಾರ್ಮಿಕರು ತಮ್ಮ ಕೆಲಸದೊಂದಿಗೆ ವೈಯಕ್ತಿಕ ಆರೋಗ್ಯ ರಕ್ಷಣಾಕವಚಗಳನ್ನು ಬಳಸಿ ಕಾಯಕ ನಿರತರಾಗಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಡಾ.ಆರ್.ಕೆ.ಪತ್ತಾರ, ಶೇಖರಗೌಡ ಬಿರಾದಾರ , ಬಾಗ್ಯರಾಜ ಸೊನ್ನದ , ಗೌಡಪ್ಪ ಗುಜಗೊಂಡ , ಗುರುಲಿಂಗಯ್ಯ ಹಿರೇಮಠ , ಅಮೀನ್ ಸಾಬ್ ದಳವಾಯಿ , ತಿಪ್ಪಣ ಕ್ಯಾತನ್ನವರ ಮುಂತಾದವರು ಇದ್ದರು
ಪೌರಕಾರ್ಮಿಕರುಗಳಾದ ರಮೇಶ ಜಾನಕರ ,ಯಮನವ್ವ ದಾಸರ , ಶಿವಾನಂದ ನರಸನಗೌಡರ ಸದಾಶಿವ ಮುಂತಾದವರನ್ನು ಗೌರವಿಸಲಾಯಿತು .ವಿರೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.