ಆರ್.ಬಿ.ವೈ.ಎಂ.ಸಿ ಕಾಲೇಜ್ ನಲ್ಲಿ ಪ್ರಕಲ್ಪ-2024 ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.25: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ  “ಐಇಇಇ-ಆರ್.ವೈ.ಎಂ.ಇ.ಸಿ ” ವಿದ್ಯಾರ್ಥಿ  ಅಧ್ಯಾಯ ಘಟಕದ ವತಿಯಿಂದ “ಐಇಇಇ ಪ್ರಾಜೆಕ್ಟ್ ಸಿಂಪೋಸಿಯಮ್ ಪ್ರಕಲ್ಪ-2024” ಕಾರ್ಯಕ್ರಮವು ಜರುಗಿತು.
ಪ್ರಾಂಶುಪಾಲರಾದ  ಡಾ|| ಟಿ. ಹನುಮಂತರೆಡ್ಡಿ ಸಕಲರಿಗೂ ಶುಭಕೋರಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಉತ್ತಮ ಪ್ರತಿಫಲವನ್ನು ನೀರಿಕ್ಷಿಸುವುದರೊಂದಿಗೆ ಜ್ಞಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು, ಉಪಪ್ರಾಂಶುಪಾಲರು, ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೆಷನ್ ವಿಭಾಗದ ಮುಖ್ಯಸ್ಥರು ಹಾಗೂ ಛೆರ್ ಐಇಇಇ-ಆರ್.ವೈ.ಎಂ.ಇ.ಸಿ ಡಾ|| ಸವಿತ ಸೊನೊಳಿ ಇವರು ಪ್ರಕಲ್ಪ-2022 ರ ಬಗ್ಗೆ ವಿವರಿಸುತ್ತಾ ಇಂಜಿನೀಯರಿಂಗ್ ವಿದ್ಯಾರ್ಥಿಗಳು ತಾಂತ್ರಿಕ ಪ್ರಾಜೆಕ್ಟ್‍ಗಳ  ಮೂಲಕ ನವ್ಯ ತಂತ್ರಜ್ಞಾನದ ಮಾಹಿತಿಗಳನ್ನು ಪಡೆದುಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ್ಳಬೇಕು ಎಂದು ಕೋರಿದರು. ಹಾಗೂ ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ವಿಧ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅಥಿತಿಯಾಗಿ ಬಳ್ಳಾರಿ ಜಿಲ್ಲಾ ಸಹಾಯಕ ಆಯುಕ್ತರು  ಶ್ರೀ ಹೇಮಂತ್.ಎನ್. “ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಈ ರೀತಿಯ ಪ್ರತಿಭಾನ್ವೇಷಣೆಯ  ಕಾರ್ಯಕ್ರಮಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ, ಹೋಸ ಕೌಶಲ್ಯಗಳ ನಾವಿನ್ಯತೆ ಎಂಬುವುದು ಇಂದಿನ ಕಾಲದ ಕ್ರಮವಾಗುತ್ತಲಿವೆ, ಯಾವಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ,  ತಾಂತ್ರಿಕ ಬೆಳವಣಿಗೆಗಳು ಎಂಬುವ ಸ್ಪರ್ಧೆಯಲ್ಲಿ ನೀವು ಗೆಲ್ಲಬಹುದು ಅಥವಾ ಗೆಲ್ಲದಿರಬಹುದು, ಆದರೆ ಭಾಗವಹಿಸುವಿಕೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ನಿಮ್ಮ ಆಲೋಚನೆಯ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತದೆ. ನಿಮ್ಮ ಸ್ಥಳದಲ್ಲಿಯೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳನ್ನು ಹುಡುಕಲು ಪ್ರಯತ್ನಿಸಿ, ಸಂಪನ್ಮೂಲಗಳು ಸಂಖ್ಯೆಯಲ್ಲಿ ಸೀಮಿತವಾದಾಗ ಸಮಾಜಕ್ಕೆ ತುಂಬಾ ಉಪಯುಕ್ತವಾದ ಹೊಸ ಆವಿಷ್ಟಾರಗಳು ಫ್ಲಾಶ್ ಆಗಿ ಬರುತ್ತವೆ ಎಂಬುದನ್ನು ದಯವಿಟ್ಟು ನೆನಪಿಡಿ ” ಎಂದುತಿಳಿಸಿದರು, ಹಾಗೂ vಅವರು ತಮ್ಮ ಶೈಕ್ಷಣಿಕ ಅವಧಿಯ ಅನುಭವಗಳನ್ನು ನೆನಪಿಸಿಕೊಂಡರು.
 ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಾನೇಕುಂಟೆ ಬಸವರಾಜ, “ನಮ್ಮ ವಿದ್ಯಾರ್ಥಿಗಳು 360 ಡಿಗ್ರಿ ಅಭಿವೃದ್ಧಿಯಾಗಿ ಬೆಳೆಯುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ, ಎರಡು ಮೂರು ದಶಕಗಳ ಹಿಂದೆ ಹೊಲಿಸಿದರೆ ಇಂದು ನಾವು ಹಲವಾರು ಸೌಲಭ್ಯಗಳನ್ನು ಹೊಂದಿದ್ದೇವೆ, ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಒಮ್ಮೆ ಭಾಗವಹಿಸಿದರೆ ಜಗತ್ತು ಹೇಗೆ ಮುಂದುವರಿಯುತ್ತಿದೆ ಬೆಳೆಯುತ್ತಿದೆ ಎಂದು ತಿಳಿಯುತ್ತದೆ ಮತ್ತು ಅದು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ , ಇಂತಹ ಕಾರ್ಯಕ್ರಮಗಳನ್ನು  ನಮ್ಮ  ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ ಮಾಡುವುದರಿಂದ ಕಿರಿಯ ವಿದ್ಯಾರ್ಥಿಗಳಿಗೆ ಉತ್ತೇಜನ ವಾಗುತ್ತದೆ ಹಾಗೂ ಒಂದೆರಡು ಹಂತದಲ್ಲಿ  ಪ್ರಯತ್ನ ಪಟ್ಟರೇ ಸಮಾಜಕ್ಕೆ ಹೊಸ ಆವೀಕ್ಷಾರ ಒದಗಿಸಬಹುದು” ಎಂದುತಿಳಿಸಿದರು.
ಐಇಇಇ ಪ್ರಾಜೆಕ್ಟ್ ಸಿಂಪೋಸಿಯಮ್ ತೀರ್ಪುಗಾರಾರಾಗಿ ಏರ್ ಪೋರ್ಟ್ ಅಧಿಕಾರಿಗಳು ಶ್ರಿ ರಮೇಶ್ ಸಿಎಚ್ ವಿ, ಕೆ.ಪೂರ್ಣ ಚಂದ್ರರಾವ್, ಪಿ.ರಮೇಶ್ ಕುಮಾರ್, ಹಾನಗಲ್ ಕುಮಾರಸ್ವಾಮಿ ಪಾಲಿಟೆಕ್ನಿಕ್‍ನ ಶ್ರೀಮತಿ ಗೌಸಿಯಾ ಬೇಗಂ ಇವರುಗಳು ಭಾಗವಹಿಸಿದ್ದರು. ವೀ.ವಿ.ಸಂಘದ ಅಧ್ಯಕ್ಷರು ಶ್ರೀ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಶ್ರೀ ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳು ಶ್ರೀ ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಶ್ರೀ ಬೈಲುವದ್ದಿಗೇರಿ ಎರ್ರಿಸ್ವಾಮಿ ಶುಭಹಾರೈಸಿದರು. ಶ್ರೀಮತಿ ವಾಣಿ ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರು, 
 ಐಇಇಇ-ಛೆರ್, ಉತ್ತರ ಕರ್ನಾಟಕ ಸಬ್-ಸೆಕ್ಸನ್ ರವಿ ಹೊಸಮಣಿ,  ಐಇಇಇ-ಆರ್.ವೈ.ಎಂ.ಇ.ಸಿ ಕಾರ್ಯದರ್ಶಿಗಳಾದ ಡಾ|| ಕೋಟ್ರೇಶ್ ಎಸ್, ಖಜಾಂಚಿಗಳಾದ ಡಾ|| ವೀರಭದ್ರಪ್ಪ ಆಲಗೂರು, ಇಂಜಿನೀರಿಂಗಗ  ವಿಭಾಗಗಳ ಮುಖ್ಯಸ್ಥರು , ಐಇಇಇ-ಆರ್.ವೈ.ಎಂ.ಇ.ಸಿ ವಿದ್ಯಾರ್ಥಿ ಅಧ್ಯಾಯದ ಭೋಧಕ ಮತ್ತು ವಿದ್ಯಾರ್ಥಿ ಸದಸ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಡಾ|| ವೀರಭದ್ರಪ್ಪ ಆಲಗೂರು, ವಂದಿಸಿದರು. ಐಇಇಇ-ಆರ್.ವೈ.ಎಂ.ಇ.ಸಿ ತಂಡದಲ್ಲಿ ಶ್ರೀಮತಿ ಎ.ಶಿವಮ್ಮ, ಶ್ರೀಮತಿ ಶೀಲಾ ಬಿ.ಪಿ, ಬಿ.ವೀರೇಶ್‍ಗೌಡ, ಶಾಂತ ಕುಮಾರ್.ಯು, ಅಶ್ವಿನಿ.ಕೆ, ವಾಣಿ ಹೆಚ್, ಗಣೇಶ್ ಹೆಚ್., ಸೌಮ್ಯ ಎ, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ ವೃಂದದವರೂ, ಭಾಗವಹಿಸಿದ್ದರು.