ಪ್ರಜ್ವಲ್ ಬಂಧನಕ್ಕೆ ಸಾಹಿತಿ ಡಾ. ಮರುಳ ಸಿದ್ದಪ್ಪ ಆಗ್ರಹ
ಬೆಂಗಳೂರು.ಮೇ.೨೫- ಜಗತ್ತಿನಲ್ಲೇ ಅತ್ಯಂತ ಕ್ರೂರ ಮತ್ತು ಅಮಾನುಷ ಎಂದು ಹೇಳಬಹುದಾದ ಹಾಸನದ ಪ್ರಜ್ವಲ್ ಅವರ ಪೆನ್‌ಡ್ರೈವ್ ಪ್ರಕರಣ ಭಾರೀ ಸದ್ದು ಮಾಡಿದೆ. ಈ ಸಂಬಂಧ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಈ ಕೂಡಲೇ ಬಂಧಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು
ಸಾಹಿತಿ ಡಾ. ಕೆ. ಮರುಳ ಸಿದ್ದಪ್ಪ ಆಗ್ರಹಿಸಿದ್ದಾರೆ.
ದೇಶಾದ್ಯಂತ ಸುದ್ದಿಯಾಗಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮೇ೩೦ರಂದು ಬೃಹತ್ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಸಭೆಯನ್ನ ಆಯೋಜಿಸಲಾಗಿತ್ತು.ಈ ಸಭೆಯ ಉದ್ಘಾಟನೆ ಸಭೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಕೆ. ಮರುಳ ಸಿದ್ದಪ್ಪ, ಈ ಕ್ರೂರ ಪ್ರಕರಣವನ್ನು ನಾವು ದಮನ ಮಾಡದೆ ಹೋದರೆ ಮುಂದಿನ ನಾಗರಿಕ ಸಮಾಜಕ್ಕೆ ಬಹಳಷ್ಟು ತೊಂದರೆಯಾಗಲಿದೆ ಎಂದರು. ಮೇ೩೦ನೇ ರಂದು ಎಲ್ಲ ಪ್ರಗತಿಪರರು ಚಿಂತಕರು ಸಾಹಿತಿಗಳು ಕಲಾವಿದರು ಭಾಗವಹಿಸಿ ಸ್ಥಳೀಯ ಜನರಿಗೆ ಮಾನಸಿಕ ಸ್ಥೈರ್ಯವನ್ನು ತುಂಬೋಣ ಅಂತ ಹೇಳಿ ಅವರೆಲ್ಲರೂ ಕೂಡಿ ಇಲ್ಲೂ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಡಾ. ವಿಜಯಮ್ಮ ಮಾತನಾಡಿ, ನಿಜವಾಗಿಯೂ ಒಂದು ನಾಗರಿಕ ಸಮಾಜದಲ್ಲಿ ಇಂತಹ ಅಮಾನುಷ ಘಟನೆ ನಿರ್ಭಯವಾಗಿ ಅಲ್ಲಿನ ಸಂತ್ರಸ್ತರು ತಮ್ಮ ನೋವುಗಳನ್ನು ಹೇಳುವ ಮುಕ್ತವಾದಂತ ಅವಕಾಶವನ್ನು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಮೇ.೩೦ರಂದು ನಡೆಯುವ ಸಭೆಯಲ್ಲಿ ಕೂಡ ಎಲ್ಲರೂ ಭಾಗವಹಿಸುವುದರ ಮೂಲಕ ಪ್ರತಿಭಟಿಸಬೇಕು ಎಂದರು. ಸಭೆಯಲ್ಲಿ ಎಸ್ ಜಿ ಸಿದ್ದರಾಮಯ್ಯ, ಜಿ ರಾಮಕೃಷ್ಣ ಎಲ್‌ಎನ್ ಮುಕುಂದರಾಜ್, ನಾಗರಾಜ್ ಮೂರ್ತಿ, ಕಾ ತ ಚಿಕ್ಕಣ್ಣ, ಲಕ್ಷ್ಮಣ ಕೊಡಸೆ,ದಿನೇಶ್ ಅಮೀನ್ ಮಟ್ಟು, ಡಾ ಗೋವಿಂದ ನಾಯಕ್, ಡಾ ಬಾನು ಪ್ರಕಾಶ್, ಇನ್ನಿತರ ಹಲವಾರು ಜನ ಪ್ರಗತಿಪರರು ಸಾಹಿತಿಗಳು ಚಿಂತಕರು ಕಲಾವಿದರು ಹೋರಾಟಗಾರ್ತಿ ಭಾಗವಹಿಸಿದ್ದರು. ಸಾಹಿತ್ಯ ಕಲಾವಿದರು ಮತ್ತು ಪ್ರಗತಿಪರ ರಾಜ್ಯಾದ್ಯಂತ ಎಲ್ಲರೂ ಕೂಡ ಚಳುವಳಿನಲ್ಲಿ ಭಾಗವಹಿಸಲು ವಿನಂತಿ ಮಾಡಲಾಯಿತು.