ಸಂಭ್ರಮದ ಕಡುಬಿನ ಕಾಳಗ
ಶಿರಹಟ್ಟಿ, ಮೇ 25: ದ್ವೇಷ ಬಿಡು-ಪ್ರೀತಿ ಮಾಡು ಎಂಬ ದಿವ್ಯ ಸಂದೇಶವನ್ನು ಸಾರಿದ ಶಿರಹಟ್ಟಿಯ ಕರ್ತೃ ಶ್ರೀ ಜ.ಫಕೀರೇಶ್ವರ ಜಾತ್ರಾ ಮಹೋತ್ಸವದ 2ನೇ ದಿನವಾದ ಶುಕ್ರವಾರ ಕಡುಬಿನ ಕಾಳಗ ಸಂಭ್ರಮದಿಂದ ಜರುಗಿತು.
ಗಜರಾಜನ ಹಾಗೂ ಒಂಟೆಗಳ ಸ್ವಾಗತದೊಂದಿಗೆ, ನಗಾರಿಯ ನಿನಾದ, ನಂದಿಕೋಲಿನ ಮೆರವಣಿಗೆ, ಡೊಳ್ಳು ಕುಣಿತ ಮುಂತಾದ ಸಪ್ತಸ್ವರನಾದಗಳೊಂದಿಗೆ ಜ.ಫಕೀರಸಿದ್ಧರಾಮ ಸ್ವಾಮೀಜಿ ಅಶ್ವಾರೂಢರಾಗಿ ಬೆಲ್ಲದ ಚೂರುಗಳನ್ನು ಭಕ್ತರ ಕಡೆಗೆ ಎಸೆಯುತ್ತಿದ್ದರು. ಭಕ್ತರು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.
ಕೊನೆಗೆ ಪರಂಪರೆಯಂತೆ ಮುಸ್ಲಿಂ ಕುಟುಂಬದವರಾದ ಅತ್ತಾರ ಮನೆತನದವರು ಶ್ರೀಗಳಿಗೆ ಗುಲಾಲು ಎರಚುತ್ತಿದ್ದಂತೆ ಕಡುಬಿನ ಕಾಳಗಕ್ಕೆ ತೆರೆ ಬಿದ್ದಿತು.